Daily Horoscope
✕

ರಾಜ್ಯ ರಾಜಕಾರಣದಲ್ಲಿ ‘ಸಾಹುಕಾರ್’ ಆ್ಯಕ್ಟೀವ್

Webdunia
ಬುಧವಾರ, 20 ಸೆಪ್ಟಂಬರ್ 2023 (18:42 IST)
ರಾಜ್ಯ ರಾಜಕಾರಣದಲ್ಲಿ ಗೋಕಾಕ್ ಸಾಹುಕಾರ್ ಮತ್ತೆ ಆ್ಯಕ್ಟೀವ್ ಆಗಿದ್ದಾರೆ. ಲೋಕಸಮರದ ಹಿನ್ನೆಲೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಗುಪ್ತ ಸಭೆ ನಡೆಸುತ್ತಿದ್ದಾರೆ. ಲೋಕಸಭಾ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಅಂತಿಮ ಹಂತದ ಚರ್ಚೆಯಾಗಿದ್ದು, ಕಮಲ-ದಳ ಮೈತ್ರಿ ಮೂಲಕ ಕಾಂಗ್ರೆಸ್ ಸೋಲಿಗೆ ಸಾಹುಕಾರ್ ರಣತಂತ್ರ ಹೆಣೆಯುತ್ತಿದ್ದಾರೆ. ಆಪ್ತ ಬಳಗವನ್ನು ಚುನಾವಣೆಗೆ ಸಜ್ಜುಗೊಳಿಸಲು ರಮೇಶ್ ಜಾರಕಿಹೊಳಿ ಮುಂದಾಗಿದ್ದಾರೆ. ಈಗಾಗಲೇ ಬೆಂಗಳೂರು ಗ್ರಾಮಾಂತರದಲ್ಲಿ ಗೆಳೆಯ ಮಾಜಿ ಸಚಿವ CP ಯೋಗೇಶ್ವರ್​​​ ಟಿಕೆಟ್ ಕುರಿತಂತೆ ಮಾಜಿ ಸಿಎಂ H.D.ಕುಮಾರಸ್ವಾಮಿ ಜೊತೆಗೆ ಮಾತುಕತೆ ನಡೆಸಿದ್ದಾರೆ. ಚಿಕ್ಕಬಳ್ಳಾಪುರದಲ್ಲೂ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಸಚಿವ ಡಾ.K.ಸುಧಾಕರ್ ಸ್ಫರ್ಧೆಗೆ ಸಿದ್ಧತೆ ನಡೆಸಿದ್ದಾರೆ. ಸುಧಾಕರ್ ಸ್ಫರ್ಧೆ ಬಗ್ಗೆ ಕೂಡ ಕುಮಾರಸ್ವಾಮಿ ಜೊತೆಗೆ ಸಾಹುಕಾರ್ ಮಾತುಕತೆ ನಡೆಸಿದ್ದಾರೆ. ನಿನ್ನೆ ಸುಧಾಕರ್ ಭೇಟಿ ಮಾಡಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮಾತುಕತೆ ನಡೆಸಿದ್ದಾರೆ. ರಮೇಶ್ ಜಾರಕಿಹೊಳಿ ಕೂಡ ನಾಳೆ ದೆಹಲಿಗೆ ತೆರಳುತ್ತಿದ್ದಾರೆ.. ದೆಹಲಿ ನಾಯಕರ ಭೇಟಿ ವೇಳೆ ಬೆಂಗಳೂರು ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರದ ಕುರಿತು ಚರ್ಚೆ ಮಾಡುವ ಸಾಧ್ಯತೆಯಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Weather: ಬೆಂಗಳೂರು ಸೇರಿದಂತೆ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಸಂಜೆ ಮಳೆ ಮುನ್ಸೂಚನೆ

ಬೆಂಗಳೂರು ವೋಟ್ ಚೋರಿ ಪ್ರತಿಭಟನೆಯಲ್ಲಿ ಫ್ರೀ ಪ್ಯಾಲೆಸ್ತೀನ್ ಸ್ಲೋಗನ್: ಇದೇನು ಭಾರತ ವಿರೋಧಿ ಹೋರಾಟವೇ ಎಂದ ನೆಟ್ಟಿಗರು

ಚುನಾವಣಾ ಆಯೋಗದ ಪರ ನಿಂತ 42 ಮಾಜಿ ನ್ಯಾಯಾಧೀಶರು: ಬಹಿರಂಗ ಪತ್ರದ ಮೂಲಕ ಎಚ್ಚರಿಕೆ

ಪ್ರಧಾನಿ ಮೋದಿ ಹೊಗಳಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರಿಂದ ಕಾಶ್ಮೀರಿ ಯುವಕನ ಮೇಲೆ ಹಲ್ಲೆ: Video

ದೆಹಲಿ ಪೊಲೀಸರಿಂದ ಗೂಂಡಾಗಿರಿ, ಅಕ್ಟೋಬರ್ 10ರಿಂದ ಮತ ಉಳಿಸಿ ದೇಶ ಉಳಿಸಿ ಪಾದಯಾತ್ರೆ: ಬಿ.ಕೆ. ಹರಿಪ್ರಸಾದ್

ಮುಂದಿನ ಸುದ್ದಿ
Show comments