Daily Horoscope
✕

ಡಿಸಿಎಂ ಚರ್ಚೆಯಲ್ಲಿ ಸಚಿವರ ಜಾಣ ನಡೆ

Webdunia
ಬುಧವಾರ, 20 ಸೆಪ್ಟಂಬರ್ 2023 (18:24 IST)
ಸಮುದಾಯವಾರು ಡಿಸಿಎಂ ನೇಮಕ ವಿಚಾರ ಚರ್ಚೆಗೆ ಬಂದಿದ್ದು, ಈ ವಿಚಾರದಲ್ಲಿ ಹಲವು ಸಚಿವರು ಅಂತರ ಕಾಯ್ದುಕೊಂಡಿದ್ದಾರೆ. ಲೋಕಸಭಾ ಚುನಾವಣೆ ಹಿನ್ನೆಲೆ ಸಮುದಾಯವಾರು ಡಿಸಿಎಂ ನೇಮಕ ಆಗಬೇಕು ಎಂದು ಸಚಿವ ರಾಜಣ್ಣ ಆಗ್ರಹಿಸಿದ್ರು.. ಸಚಿವ ರಾಜಣ್ಣ ಆಗ್ರಹಕ್ಕೆ ಹಲವು ಸಚಿವರು ಸೊಪ್ಪು ಹಾಕದೇ ಅಂತರ ಕಾಯ್ದುಕೊಂಡಿದ್ದಾರೆ. ಸಚಿವರಾದ ಶಿವನಾಂದ ಪಾಟೀಲ್, ಶಿವರಾಜ್ ತಂಗಡಗಿ, ನಾಗೇಂದ್ರ, ಶರಣಪ್ರಕಾಶ್ ಪಾಟೀಲ್, ರಹೀಂ ಖಾನ್, ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ಹಲವು ಸಚಿವರು ಈ ವಿಚಾರದ ಚರ್ಚೆಯಲ್ಲಿ ಅಂತರ ಕಾಯ್ದುಕೊಂಡಿದ್ದಾರೆ.. ಸದ್ಯ ಸಚಿವರಾಗಿದ್ದೇವೆ.. ಡಿಸಿಎಂ ವಿಚಾರದ ಚರ್ಚೆ ಬೇಡ ಎಂದು ದೂರ ಉಳಿದಿದ್ದಾರೆ. ಹಿರಿಯ ನಾಯಕರು ಡಿಸಿಎಂ ಆಗ್ತಾರೆ.. ನಾವು ಯಾರ ಪರ-ವಿರೋಧ ನಿಲ್ಲೋದು ಬೇಡ.. ಸಚಿವರಾಗಿ ಈ ರೀತಿಯ ಚರ್ಚೆಯಲ್ಲಿ ಕಾಣಿಸಿಕೊಂಡ್ರೆ ನಮ್ಮ ಸ್ಥಾನದ ಮೇಲೂ ಪರಿಣಾಮ ಬೀರುತ್ತದೆ.. ಸದ್ಯ ಸಚಿವ ಸ್ಥಾನ ಸಿಕ್ಕಿದೆ, ಪಕ್ಷದಲ್ಲಿ ಹಲವರು ಪ್ರಭಾವಿಗಳಿದ್ದಾರೆ ಎಂದು ಇವರುಗಳು ಭಾವಿಸಿದಂತಿದೆ.. ಬಣ ರಾಜಕೀಯ ಅಂತ ಹೈಕಮಾಂಡ್ ಕೆಂಗ್ಗಣ್ಣಿಗೆ ಗುರಿಯಾದೋದು ಬೇಡ.. ಇನ್ನು ಡಿಸಿಎಂ ವಿಚಾರ ಹೈಕಮಾಂಡ್​ಗೆ ಬಿಟ್ಟಿದ್ದು.. ನಾವು ನಮ್ಮ ಇಲಾಖೆಯ ಬಗ್ಗೆ ಗಮನ ನೀಡೋಣ ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬೆಂಗಳೂರು ವೋಟ್ ಚೋರಿ ಪ್ರತಿಭಟನೆಯಲ್ಲಿ ಫ್ರೀ ಪ್ಯಾಲೆಸ್ತೀನ್ ಸ್ಲೋಗನ್: ಇದೇನು ಭಾರತ ವಿರೋಧಿ ಹೋರಾಟವೇ ಎಂದ ನೆಟ್ಟಿಗರು

ಚುನಾವಣಾ ಆಯೋಗದ ಪರ ನಿಂತ 42 ಮಾಜಿ ನ್ಯಾಯಾಧೀಶರು: ಬಹಿರಂಗ ಪತ್ರದ ಮೂಲಕ ಎಚ್ಚರಿಕೆ

ಪ್ರಧಾನಿ ಮೋದಿ ಹೊಗಳಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರಿಂದ ಕಾಶ್ಮೀರಿ ಯುವಕನ ಮೇಲೆ ಹಲ್ಲೆ: Video

ದೆಹಲಿ ಪೊಲೀಸರಿಂದ ಗೂಂಡಾಗಿರಿ, ಅಕ್ಟೋಬರ್ 10ರಿಂದ ಮತ ಉಳಿಸಿ ದೇಶ ಉಳಿಸಿ ಪಾದಯಾತ್ರೆ: ಬಿ.ಕೆ. ಹರಿಪ್ರಸಾದ್

ಹಣವಿಲ್ಲದಿದ್ದರೂ ಮುಖ್ಯಮಂತ್ರಿಗಳಿಂದ ಪುಕ್ಕಟೆ ಘೋಷಣೆ: ಬಿ.ವೈ.ವಿಜಯೇಂದ್ರ

ಮುಂದಿನ ಸುದ್ದಿ
Show comments