Select Your Language

Notifications

webdunia
webdunia
webdunia
webdunia

ಬೆದರಿಕೆಗಳಿಗೆ ಹಾಡಿನ ಮೂಲಕವೇ ಉತ್ತರಿಸಿದ ಸುಹಾನಾ

sahana syed
Bengaluru , ಸೋಮವಾರ, 13 ಮಾರ್ಚ್ 2017 (18:07 IST)
ಖಾಸಗಿ ಚಾನಲ್`ನ ರಿಯಾಲಿಟಿ ಶೋನಲ್ಲಿ ಹಿಂದೂ ದೇವರ ಭಕ್ತಿಗೀತೆ ಹಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದ ಸುಹಾನಾ ಸಯ್ಯದ್`ಗೆ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆಗಳು ಬಂದಿದ್ದವು. ಮುಸ್ಲಿಂ ಯುವತಿಯಾಗಿ ಹಿಂದೂ ದೇವರ ಹಾಡು ಹಾಡಿದ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು.

ಈ ವಿವಾದದ ಬಗ್ಗೆ ಹೊರಗೆಲ್ಲೂ ಮಾತನಾಡದ ಸುಹಾನಾ, ಹಾಡೆಇನ ಮೂಲಕವೇ ಉತ್ತರ ಕೊಟ್ಟಿದ್ದಾರೆ. ಮುಕುಂದ ಮುರಾರಿ ಚಿತ್ರದ ಎಲ್ಲ ದೇವರು ಒಬ್ಬನೇ ಎಂಬ ಸಂದೇಶ ಸಾರುವ ಹಾಡು ಹಾಡುವ ಮೂಲಕ ಸರ್ವ ಧರ್ಮ ಸಮನ್ವಯದ ಸಂದೇಶ ಸಾರಿದ್ದಾರೆ. ಇದೇವೇಳೆ, ಮಾತನಾಡಿದ ಸುಹಾನಾ, ನನ್ನನ್ನ ಒಬ್ಬ ಗಾಯಕಿಯಾಗಿ ಅಷ್ಟೇ ನೋಡಿ. ನಿಮ್ಮ ಆಲೋಚನಗಳಿಗೆ ನನ್ನ ಹೆಸರು ಬಳಸಿಕೊಳ್ಳಬೇಡಿ. ನಾನು ಹಾಡುವುದನ್ನ ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಕಾರ್ಯಕ್ರಮದ ಮುಖ್ಯಸ್ಥ ರಾಘವೇಂದ್ರ ಹುಣಸೂರ್ ಸಹ ನಾವು ಸುಹಾನಾಳನ್ನ ಒಬ್ಬ ಗಾಯಕಿಯಾಗಿಯಷ್ಟೇ ಕರೆ ತಂದಿದ್ದೇವೆ. ನಮಗೆ ಯಾವುದೇ ಗಿಮಿಕ್ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ವಿಡಿಯೋ ಕೃಪೆ: ಜೀ ಕನ್ನಡ



Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕ ಟಾರ್ಗೆಟ್: ರಾಜ್ಯದ ಬಿಜೆಪಿ ನಾಯಕರಿಗೆ ಅಮಿತ್ ಶಾ ಬುಲಾವ್