Webdunia - Bharat's app for daily news and videos

Install App

ಶಾಂತಿ ಮಾತುಕತೆಗೆ ಒಪ್ಪಿದ ರಷ್ಯಾ- ಉಕ್ರೇನ್;‌ ಟರ್ಕಿಯಲ್ಲಿಂದು ಸಂಧಾನ ಸಭೆ

Webdunia
ಸೋಮವಾರ, 28 ಮಾರ್ಚ್ 2022 (19:30 IST)
ಉಕ್ರೇನ್‌ ಮೇಲೆ ರಷ್ಯಾದ ಮಿಲಿಟರಿ ಕಾರ್ಯಾಚರಣೆ ಆರಂಭಗೊಂಡು 32 ದಿನಗಳು ಕಳೆದಿದೆ. ಎರಡೂ ದೇಶಗಳ ನಡುವೆ ಘನಘೋರ ಕದನ ನಡೆಯುತ್ತಿದೆ. ಆ ಎರಡು ರಾಷ್ಟ್ರಗಳ ನಡುವೆ ಕದನ ನಡೆಯುತ್ತಿದ್ದರೂ ಅದರ ಪರಿಣಾಮಗಳು ಇಡೀ ವಿಶ್ವದ ಮೇಲೆ ತಟ್ಟಿದೆ. ಈ ನಡುವೆ ಮಹತ್ವದ ಬೆಳವಣಿಗೆ ನಡೆದಿದ್ದು, ಸೋಮವಾರ ಟರ್ಕಿಯಲ್ಲಿ ಎರಡನೇ ಸುತ್ತಿನ ಸಂಧಾನ ಮಾತುಕತೆಗೆ ಎರಡೂ ದೇಶಗಳು ಒಪ್ಪಿಕೊಂಡಿವೆ.
ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ನೇತೃತ್ವದಲ್ಲಿ28 – 30 ರಂದು ರಷ್ಯಾ- ಉಕ್ರೇನ್​ ನಡುವೆ ಸಂಧಾನ ಮಾತುಕತೆ ನಡೆಯಲಿದೆ. ಕೀವ್‌ ಮತ್ತು ಮಾಸ್ಕೋದ ಸಂಧಾನ ಕಾರರು ಟರ್ಕಿಯ ಇಸ್ತಾಂಬುಲ್​​ ನಗರದಲ್ಲಿ ಶಾಂತಿ ಮಾತುಕತೆ ನಡೆಸಲಿದ್ದಾರೆ.
ರಷ್ಯಾ ಅಧ್ಯಕ್ಷ ಪುಟಿನ್‌ ಹಾಗೂ ಟರ್ಕಿ ಅಧ್ಯಕ್ಷ ಎರ್ಡೋರ್ಗನ್‌ ನಡುವೆ ಭಾನುವಾರ ನಡೆದು ದೂರವಾಣಿ ಸಂಭಾಷಣೆ ವೇಳೆ ಸಂಧಾನ ಮಾತುಕತೆಗೆ ಒಪ್ಪಿಕೊಳ್ಳಲಾಗಿದೆ. ರಷ್ಯಾ – ಉಕ್ರೇನ್ ಸಂಘರ್ಷದ ಕುರಿತಂತೆ ಉಭಯ ನಾಯಕರು ಚರ್ಚಿಸಿದರು. ಈ ವೇಳೆ ಮುಂದಿನ ಸಭೆಯನ್ನು ಇಸ್ತಾಂಬುಲ್​ನಲ್ಲಿ ನಡೆಸಲು ರಷ್ಯಾ ಅಧ್ಯಕ್ಷ ಪುಟಿನ್ ಒಪ್ಪಿಕೊಂಡಿದ್ದಾರೆ ಎಂದು ಟರ್ಕಿ ಅಧ್ಯಕ್ಷ ಎರ್ಡೋರ್ಗನ್‌ ಹೇಳಿಕೆ ನೀಡಿದ್ದಾರೆ. ಮಾರ್ಚ್ 28 – 30 ರಂದು ಟರ್ಕಿಯಲ್ಲಿ ಮುಂದಿನ ಸುತ್ತಿನ ಮಾತುಕತೆ ನಡೆಸಲು ನಿರ್ಧರಿಸಲಾಗಿದೆ ಎಂದು ಉಕ್ರೇನ್‌ ನ ಸಂಧಾನಕಾರ ಅರಾಖಮಿಯಾ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ರಷ್ಯಾ ಸಂಧಾನ ತಂಡದ ಮುಖ್ಯಸ್ಥ ವ್ಲಾಡಿಮಿರ್ ಮೆಡಿನ್ಸ್ಕಿ ಸಹ ಈ ವಿಚಾರವನ್ನು ದೃಢಪಡಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments