Publish Date: Wed, 01 Apr 2020 (07:37 IST)
Updated Date: Wed, 01 Apr 2020 (07:42 IST)
ಕಲಬುರಗಿ: ಚೀನಾದಲ್ಲಿ ಶುರುವಾದ ಕೊರೊನಾ ವೈರಸ್ ಈಗ ದೇಶದೆಲ್ಲೆಡೆ ಹರಡಿ ಎಲ್ಲರ ಎದೆಯಲ್ಲೂ ಭಯವನ್ನುಂಟು ಮಾಡಿದೆ. ಜತೆಗೆ ಈಗಾಗಲೇ ಇದಕ್ಕೆ ಜನರು ಕೂಡ ತಮ್ಮ ಜೀವ ಕಳೆದುಕೊಂಡಿದ್ದಾರೆ. ದೇಶದಲ್ಲಿ ನಿಷೇಧಾಜ್ಞೆ ಜಾರಿಯಿದ್ದರೂ ಜನ ಮಾತ್ರ ಎಚ್ಚೆತ್ತುಕೊಂಡಿಲ್ಲ.
ಕಲಬುರಗಿ ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸಲು ಜನ ಮುಗಿ ಬಿದ್ದಿದ್ದಾರೆ. ಲಾಕ್ ಡೌನ್ ಉಲ್ಲಂಘಿಸಿ ತರಕಾರಿ ಖರೀದಿಯಲ್ಲಿ ಜನ ನಿರತರಾಗಿದ್ದಾರೆ. ಇದರಿಂದ ಕಲಬುರಗಿ ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ಜನದಟ್ಟಣೆ ಉಂಟಾಗಿದೆ.ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ಯಾವುದೇ ರೀತಿಯ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಮಾರಾಟ, ಖರೀದಿ ನಡೆದಿದೆ.