Webdunia - Bharat's app for daily news and videos

Install App

ಉಡಾಫೆ ವರ್ತನೆ: ಕಾಂಗ್ರೆಸ್ ಶಾಸಕರಿಂದಲೇ ಸಚಿವ ಅಂಜನೇಯ್‌ಗೆ ತರಾಟೆ

Webdunia
ಮಂಗಳವಾರ, 24 ಮೇ 2016 (15:02 IST)
ಏಕವಚನದಲ್ಲಿ ಶಾಸಕರನ್ನು ನಿಂದಿಸಿದ್ದ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್‌.ಆಂಜನೇಯನವರು ಶಾಸಕ ಎಂ.ಪಿ.ನರೇಂದ್ರ ಅವರನ್ನು ಕ್ಷಮೆಯಾಚಿಸಿದ್ದಾರೆ. ಅಡಳಿತ ಪಕ್ಷದ ಕಾಂಗ್ರೆಸ್ ಸದಸ್ಯರೇ ಸಚಿವ ಅಂಜನೇಯ್‌ರನ್ನು ತರಾಟೆಗೆ ತೆಗೆದುಕೊಂಡ ಘಟನೆ ವರದಿಯಾಗಿದೆ.
 
ಸಚಿವ ಎಚ್‌. ಆಂಜನೇಯ ನೇತೃತ್ವದಲ್ಲಿ ಎಸ್‌‌ಸಿ ಎಸ್‌ಟಿ ಸಮುದಾಯದ ಅನುದಾನ ಬಳಕೆಯ ಕುರಿತು ವಿಧಾನಸಭೆಯಲ್ಲಿ ಸಭೆ ನಡೆದಿತ್ತು. ಈ ವೇಳೆ, ಸಚಿವ ಆಂಜನೇಯ ಮತ್ತು ಶಾಸಕ ಎಂ.ಪಿ.ನರೇಂದ್ರ ಅವರ ಮಧ್ಯ ಮಾತಿನ ಚಕಮಕಿ ನಡೆದಿದೆ. ಸಚಿವರು ಉಡಾಫೆಯಂತೆ ವರ್ತಿಸಿ, ಗೊತ್ತು ಗುರಿ ಇಲ್ಲದೆ ಸುಮ್ಮನೆ ಆರೋಪ ಮಾಡುತ್ತಿಯಾ ಎಂದು ಶಾಸಕ ಎಂ.ಪಿ.ನರೇಂದ್ರ ಅವರನ್ನು ಏಕವಚನದಲ್ಲಿ ನಿಂದನೆ ಮಾಡಿದ್ದಾರೆ. 
 
ಸಚಿವರ ಉಡಾಫೆ ವರ್ತನೆಯಿಂದ ಬೇಸತ್ತ ಶಾಸಕ ಎಂ.ಪಿ.ನರೇಂದ್ರ, ಸಚಿವರು ಕ್ಷಮೆಯಾಚಿಸಬೇಕೆಂದು ಪಟ್ಟು ಹಿಡಿದಿದ್ದಾರೆ. ಶಾಸಕರ ಒತ್ತಡಕ್ಕೆ ಮಣಿದು ತಮ್ಮ ಉಡಾಫೆ ವರ್ತನೆ ಕುರಿತು ಸಚಿವ ಎಚ್‌.ಆಂಜನೇಯ ಕ್ಷಮೆಯಾಚಿಸಿದ್ದಾರೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಣದೀಪ್ ಸುರ್ಜೇವಾಲಾ ರಾಜ್ಯಕ್ಕೆ ಬಂದಿರುವುದೇ ಕಪ್ಪ ಕೇಳಕ್ಕೆ: ಸಿಟಿ ರವಿ

ತೆಲಂಗಾಣದ ಎಲ್ಲ ಜಿಲ್ಲೆಗಳಲ್ಲಿ ಮಿಂಚು, ಗುಡುಗು ಸಹಿತ ಭಾರೀ ಮಳೆಯ ಮುನ್ಸೂಚನೆ

ರಾಜ್ಯ ನಾಯಕತ್ವ ಬದಲಾವಣೆ ಬಗ್ಗೆ ಅತೃಪ್ತ ಶಾಸಕರ ಭೇಟಿ ಬಳಿಕ ಸುರ್ಜೇವಾಲಾ ಹೀಗಂದ್ರು

ಕಸ ಹಾಕಿದ್ದಕ್ಕೆ ವೃದ್ಧೆಯನ್ನು ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ, ಕ್ರೂರತೆಗೆ ಭಾರೀ ಆಕ್ರೋಶ

Video: ಏಕಾಏಕಿ ಉಕ್ಕಿ ಹರಿದ ಜಲಪಾತ, ಪವಾಡ ಸದೃಶ್ಯ 6 ಮಹಿಳೆಯರು ಪಾರು

ಮುಂದಿನ ಸುದ್ದಿ
Show comments