Select Your Language

Notifications

webdunia
webdunia
webdunia
webdunia

ಕೇರಳ ಸಿಎಂ ಪಿ. ವಿಜಯನ್ ತಲೆ ತೆಗೆದಲ್ಲಿ 1 ಕೋಟಿ ಬಹುಮಾನ: ಆರೆಸ್ಸೆಸ್

ಕೇರಳ ಸಿಎಂ ಪಿ. ವಿಜಯನ್ ತಲೆ ತೆಗೆದಲ್ಲಿ 1 ಕೋಟಿ ಬಹುಮಾನ: ಆರೆಸ್ಸೆಸ್
ಉಜ್ಜಯಿನಿ , ಗುರುವಾರ, 2 ಮಾರ್ಚ್ 2017 (18:16 IST)
ಕೇರಳ ಸಿಎಂ ಪಿಣರಾಯಿ ವಿಜಯನ್ ಅವರ ತಲೆಯನ್ನು ಕಡಿದಲ್ಲಿ ಒಂದು ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಮಧ್ಯಪ್ರದೇಶದ ಆರೆಸ್ಸೆಸ್ ಮುಖಂಡ ಕುಂದನ್ ಚಂದ್ರಾವತ್ ಘೋಷಿಸಿದ್ದಾರೆ.
 
ಮಧ್ಯಪ್ರದೇಶದ ಉಜ್ಜಯನಿಯಲ್ಲಿ ಮನಾತನಾಡಿದ ಆರೆಸ್ಸೆಸ್ ಮುಖಂಡ ಕುಂದನ್ ಚಂದ್ರಾವತ್, ಕೇರಳದಲ್ಲಿ ನಡೆದ 300 ಆರೆಸ್ಸೆಸ್ ಕಾರ್ಯಕರ್ತರ ಹತ್ಯೆಗೆ ನೇರ ಹೊಣೆ. ಆದ್ದರಿಂದ, ಸಿಎಂ ವಿಜಯನ್ ತಲೆಯನ್ನು ತಂದೊಪ್ಪಿಸಿದಲ್ಲಿ 1 ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ತಿಳಿಸಿದ್ದಾರೆ.
 
ನನ್ನ ಬಳಿ ಒಂದು ಕೋಟಿ ರೂಪಾಯಿ ನಗದು ಹಣವಿಲ್ಲ. ಆದರೆ, ನನ್ನ ಹೆಸರಲ್ಲಿರುವ ಆಸ್ತಿ ಪಾಸ್ತಿಯನ್ನು ಮಾರಾಟ ಮಾಡಿ ಹಣವನ್ನು ನೀಡುತ್ತೇನೆ ಎಂದು ಕುಂದನ್ ಹೇಳಿದ್ದಾರೆ.
 
ಆರೆಸ್ಸೆಸ್ ದೇಶ ವಿರೋಧ ಸಂಘಟನೆ ಎನ್ನುವುದು ಆರೆಸ್ಸೆಸ್ ಮುಖಂಡನ ಹೇಳಿಕೆಯಿಂದ ಸಾಬೀತಾಗಿದೆ. ಆರೆಸ್ಸೆಸ್ ಮುಖಂಡರಾದ ಮೋಹನ್ ಭಾಗವತ್ ಮತ್ತು ಪ್ರಧಾನಿ ಮೋದಿ ಯಾಕೆ ಮೌನವಾಗಿದ್ದಾರೆ ಎಂದು ಸಿಪಿಐ(ಎಂ) ಮುಖಂಡರು ಪ್ರಶ್ನಿಸಿದ್ದಾರೆ. 
 
ಸಿಎಂ ವಿಜಯನ್ ಪ್ರತಿಕ್ರಿಯೆ: ಸಂಘ ಪರಿವಾರ ಈಗಾಗಲೇ ಹಲವಾರು ಜನರ ತಲೆ ತೆಗೆದಿದೆ. ಆರೆಸ್ಸೆಸ್ ಬೆದರಿಕೆಯೊಡ್ಡಿದೆ ಎಂದು ಹೊರಗ ಹೋಗದೇ ಇರಲಿಕ್ಕೆ ಸಾಧ್ಯವೆ? ಎಂದು ಪ್ರಶ್ನಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಫೈಲ್ ಸೈಜು ಹೆಚ್ಚಿಸಿದ ಗೂಗಲ್ ಜಿಮೇಲ್