Select Your Language

Notifications

webdunia
webdunia
webdunia
webdunia

ಪೀಣ್ಯ ಕೈಗಾರಿಕಾ ಪ್ರದೇಶದ ಮೂಲ ಸೌಕರ್ಯಗಳ ಅಭಿವೃದ್ಧಿಯ 100 ಕೋಟಿ ರೂ. ಯೋಜನೆಗೆ ಅನುಮೋದನೆ

ಪೀಣ್ಯ ಕೈಗಾರಿಕಾ ಪ್ರದೇಶದ ಮೂಲ ಸೌಕರ್ಯಗಳ ಅಭಿವೃದ್ಧಿಯ 100 ಕೋಟಿ ರೂ. ಯೋಜನೆಗೆ ಅನುಮೋದನೆ
bangalore , ಮಂಗಳವಾರ, 21 ಜೂನ್ 2022 (20:03 IST)
ಏಷ್ಯಾ   ಖಂಡದ   ಅತ್ಯಂತ   ದೊಡ್ಡ ಕೈಗಾರಿಕಾ   ಪ್ರದೇಶಗಳಲ್ಲಿ   ಒಂದಾದ   ಪೀಣ್ಯ   ಕೈಗಾರಿಕಾ ಪ್ರದೇಶದ ಮೂಲ ಸೌಕರ್ಯಗಳ ಅಭಿವೃದ್ಧಿಗಾಗಿ   100  ಕೋಟಿ  ರೂಪಾಯಿ ವೆಚ್ಚದಲ್ಲಿ   ಕೈಗೊಳ್ಳಲಿರುವ ಕಾಮಗಾರಿಗಳಿಗೆ ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಸಚಿವ ಎಂಟಿಬಿ ನಾಗರಾಜು ಅವರ ಅಧ್ಯಕ್ಷತೆಯ ಉನ್ನತಮಟ್ಟದ ಸಮಿತಿ ಅನುಮೋದನೆ ನೀಡಿದೆ.
 
   ವಿಧಾನಸೌಧದಲ್ಲಿ   ಇಂದು ನಡೆದ   ಸಭೆಯಲ್ಲಿ   12 ಸಾವಿರ ಉದ್ಯಮಿಗಳಿದ್ದು,   ವಾರ್ಷಿಕ      5  ಸಾವಿರ   ಕೋಟಿ ರೂಪಾಯಿ   ತೆರಿಗೆ   ಪಾವತಿಸುತ್ತಿರುವ   ಪೀಣ್ಯ   ಕೈಗಾರಿಕಾ ಪ್ರದೇಶಕ್ಕೆ   ಮೂಲ   ಸೌಕರ್ಯ   ಕಲ್ಪಿಸುವುದು ಆದ್ಯತೆಯ   ಕೆಲಸವಾಗಿದ್ದು,   ರೂ.   ೧೦೦   ಕೋಟಿಗಳ ವೆಚ್ಚದಲ್ಲಿ  ಮೂಲ  ಸೌಕರ್ಯ  ಕಲ್ಪಿಸಲು  ಟೆಂಡರ್‌ ಕರೆಯಲು   ಸಿದ್ದತೆ   ನಡೆಸುವಂತೆ   ಸಚಿವ   ಎಂಟಿಬಿ ನಾಗರಾಜು ಸೂಚಿಸಿದರು. 
 
     ಪೀಣ್ಯ   ಕೈಗಾರಿಕಾ ಪ್ರದೇಶಕ್ಕೆ   ಮೂಲ   ಸೌಕರ್ಯ ಕಲ್ಪಿಸುವ   ಕೆಲಸ   ಸಮರೋಪಾದಿಯಲ್ಲಿ ನಡೆಯಬೇಕು.     ಗುಣಮಟ್ಟ   ಮತ್ತು   ಪ್ರಮಾಣದ ವಿಷಯದಲ್ಲಿ   ಕಟ್ಟೆಚ್ಚರ  ವಹಿಸಬೇಕು ಎಂದು   ಸಚಿವರು ತಿಳಿಸಿದರು.
 
   ಸಭೆಯಲ್ಲಿ  ವಾಣಿಜ್ಯ  ಮತ್ತು  ಕೈಗಾರಿಕಾ  ಇಲಾಖೆ ಕಾರ್ಯದರ್ಶಿ   ಪಂಕಜ್   ಕುಮಾರ್   ಪಾಂಡೆ,   ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಇಲಾಖೆ ನಿರ್ದೇಶಕಿ  ಸತ್ಯಭಾಮ,ಕೆಎಸ್ಎಸ್ಐಡಿಸಿ ವ್ಯವಸ್ಥಾಪಕ ನಿರ್ದೇಶಕ ಎಸ್.ಜೆ.ಸೋಮಶೇಖರ್ ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಹಂಪಿಯಲ್ಲಿ ವಿಶ್ವದ ಗಮನ ಸೆಳೆಯಂತಹ ಯೋಗ ದಿನಾಚರಣೆ: ಸಚಿವೆ ಶಶಿಕಲಾ ಅ ಜೊಲ್ಲೆ