Publish Date: Fri, 13 Mar 2026 (21:10 IST)
Updated Date: Fri, 13 Mar 2026 (21:12 IST)
ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಮಾಜಿ ಸಚಿವ ಬೈರತಿ ಬಸವರಾಜ್ ಇದೀಗ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಬಸವರಾಜ್ ಅವರಿಗೆ ಷರತ್ತುಬದ್ಧ ಜಾಮೀನು ನೀಡಿದ ಬೆನ್ನಲ್ಲೇ ಇದೀಗ ರಿಲೀಸ್ ಆಗಿದ್ದಾರೆ.
ನಗರದ ಪರಪ್ಪನ ಅಗ್ರಹಾರ ಜೈಲಿನಿಂದ ಇಂದು ಬೈರತಿ ಬಸವರಾಜ್ ರಿಲೀಸ್ ಆಗಿದ್ದಾರೆ. ನಿನ್ನೆಯಷ್ಟೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಜಾಮೀನು ಮಂಜೂರಾಗಿತ್ತು.
ಜೈಲಿನ ಗೇಟ್ ಬಳಿ ನೂರಾರು ಸಂಖ್ಯೆಯಲ್ಲಿ ಬೆಂಬಲಿಗರು ಜಮಾಯಿಸಿದ್ದರು. ಜೈಲಿಂದ ರಿಲೀಸ್ ಆದ ಶಾಸಕ ಬೈರತಿ ಬಸವರಾಜ್ ಕಾರಿನಲ್ಲಿ ಮನೆಗೆ ತೆರಳಿದರು.