ಮದುವೆ ಆಗುವುದಾಗಿ ನಂಬಿಸಿ ನಟಿಗೆ ದೋಚಿದ ರೌಡಿ!

Webdunia
ಭಾನುವಾರ, 15 ಆಗಸ್ಟ್ 2021 (21:09 IST)

ಬುದ್ದಿವಂತ ಸಿನಿಮಾ ಮಾದರಿಯಲ್ಲಿ ನಟಿಯೊಬ್ಬಳಿಗೆ ತಾಳಿ ಕಟ್ಟಿ ಎರಡೂವರೆ ಲಕ್ಷ ರೂ. ಒಡವೆ ಜೊತೆ ರೌಡಿಯೊಬ್ಬ ಹೊತ್ತೊಯ್ದ ಘಟ

ನೆ ಬೆಂಗಳೂರಿನಲ್ಲಿ ನಡೆದಿದೆ.

ಹುಲಿಯೂರು ದುರ್ಗದ ಕುಖ್ಯಾತ ರೌಡಿ ತಮ್ಮ ಕುಣಿಗಲ್ ಗಿರಿ ಸ್ವಂತ ಅಣ್ಣ ರೌಡಿಶೀಟರ್ ಹರೀಶ್ ಈ ಕೃತ್ಯ ಎಸಗಿದ್ದು, ಹಲವು ಕೇಸ್ ಗಳಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ರೌಡಿ ಶೀಟರ್ ಹರೀಶ. ಕಳೆದ ವರ್ಷ ರಾಜಗೋಪಾಲನಗರ ಠಾಣೆ ವ್ಯಾಪ್ತಿಯಲ್ಲಿ ವಾಸವಿರವು ನಟಿ ಹಿಂದೆ ಬಿದ್ದಿದ್ದ. ನಾನು ನಿನ್ನ ಪ್ರೀತಿಸ್ತಿನಿ . ನಿನ್ನನ್ನೆ ಮದುವೆಯಾಗ್ತೀನಿ ಅಂತ ಹೇಳಿದ್ದ. ಅದ್ರಂತೆ ಯುವತಿಯ ಮನೆಯಲ್ಲೆ ಆಕೆಗೆ ತಾಳಿ ಕಟ್ಟಿ ಮದುವೆಯಾಗಿದ್ದ.

ಮದುವೆಯಾದ ನಂತರ ಒಂದೆರಡು ದಿನ ಸಿನಿಮಾ ನಟಿ ಜೊತೆ ವಾಸವಿದ್ದ. ನಂತರ ಆಕೆಯ ಬಳಿಯಿದ್ದ ಎರಡೂವರೆ ಲಕ್ಷ ಹಣ 180 ಗ್ರಾಂ ಚಿನ್ನಾಭರಣ ಎಗರಿಸಿ ಎಸ್ಕೇಪ್ ಆಗಿದ್ದಾನೆ. ಕೃತ್ಯದ ನಂತರ ಈ ಬಗ್ಗೆ ಮೋಸಹೋದ ನಟಿ ಹರೀಶನನ್ನ ಕೇಳಿದ್ರೆ ನಾನು ಈಗಾಗಲೇ ಮದುವೆ ಆಗಿದ್ದೀನಿ. ದುಡ್ಡು ಕೊಡಲ್ಲ. ಒಡವೆನೂ ಕೊಡಲ್ಲ ಏನ್ ಮಾಡ್ತಿಯ ಮಾಡ್ಕೊ ಅಂದಿದ್ದಾನೆ. ಅಲ್ಲದೇ ಜೈಲಲ್ಲಿರೋ ತನ್ನ ಸಹೋದರ ರೌಡಿಶೀಟರ್ ಕುಣಿಗಲ್ ಗಿರಿ ಕಡೆಯಿಂದ ಪೊನ್ ಮಾಡಿಸಿದ್ದಾನೆ. ಜೈಲಿನಿಂದ ಪೊನ್ ಮಾಡಿರೋ ಕುಣಿಗಲ್ ಗಿರಿ ಕೊಟ್ಟಿರೋ ಪೊಲೀಸ್ ಕಂಪ್ಲೆಂಟ್ ವಾಪಸ್ ತಗೊ. ಇಲ್ಲ ಕೊಲೆ ಮಾಡ್ತೀವಿ ಅಂತ ಮೋಸಹೋದ ಸಿನಿಮಾ ನಟಿಗೆ ಜೀವಬೆದರಿಕೆ ಹಾಕಿದ್ದಾರೆ.

ಸದ್ಯ ಘಟನೆ ಸಂಬಂಧ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಬಂಧ ಮೋಸ ಮಾಡಿರುವ ಹರೀಶ್ ಹಾಗೂ ಆತನ ಸಹೋದರ ಕುಣಿಗಲ್ ಗಿರಿ ವಿರುದ್ದ ದೂರು ದಾಖಲಾಗಿದೆ. ಎಫ್.ಐ.ಆರ್ ಆಗ್ತಿದ್ದಂತೆ ಆರೋಪಿ ಹರೀಶ್ ಎಸ್ಕೇಪ್ ಆಗಿದ್ದು ಆತನ ಪತ್ತೆಗಾಗಿ ಪೊಲೀಸರು ಬಲೆಬೀಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಿಧವಾ ವೇತನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ, ಎಷ್ಟು ರೂಪಾಯಿ ಸಿಗುತ್ತದೆ

CET ಪರೀಕ್ಷೆ ದಿನಾಂಕ ಘೋಷಣೆ, ಯಾವಾಗ ಅರ್ಜಿ ಸಲ್ಲಿಸಬೇಕು ಇಲ್ಲಿದೆ ಸಂಪೂರ್ಣ ವಿವರ

ನಾವು ಬಿಜೆಪಿ ರಿಮೋಟ್ ಕಂಟ್ರೋಲ್ ಅಲ್ಲ: ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್

ಗ್ಯಾರಂಟಿಯಿಂದ ಯಾವುದಕ್ಕೂ ದುಡ್ಡಿಲ್ಲ, ನಾನಿನ್ನೂ ಬದುಕಿದ್ದೀನಿ, ಹೋರಾಟ ಮಾಡ್ತೀನಿ: ದೇವೇಗೌಡ

Karnataka Weather: ವಾರಂತ್ಯದಲ್ಲಿ ರಾಜ್ಯದ ಹವಾಮಾನ ಹೇಗಿರಲಿದೆ ಇಲ್ಲಿದೆ ವಿವರ

ಮುಂದಿನ ಸುದ್ದಿ
Show comments