ನರ್ಸ್ ವೊಬ್ಬಳನ್ನು ಪರಿಚಯ ಮಾಡಿಕೊಂಡು ಸಲುಗೆ ಬೆಳೆಸಿಕೊಂಡಿದ್ದ ಯುವಕನೊಬ್ಬ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ.
ಪರಿಚಯ ಸಲುಗೆಯಾದ ಮೇಲೆ ಮನೆಗೆ ಕರೆದುಕೊಂಡು ಬಂದಿದ್ದ ಆರೋಪಿ ಮೋನು ಎಂಬಾತ ಜ್ಯೂಸ್ ನಲ್ಲಿ ಮತ್ತು ಬರೋ ಔಷಧ ಹಾಕಿ ನರ್ಸ್ ಮೇಲೆ ಅತ್ಯಾಚಾರ ನಡೆಸಿದ್ದಾನೆ ಅಂತ ದೂರಲಾಗಿದೆ.
ಅಲ್ಲದೇ ಅತ್ಯಾಚಾರ ಮಾಡುತ್ತಿದ್ದ ವಿಡಿಯೋವನ್ನು ಇಟ್ಟುಕೊಂಡು ಮದುವೆಯಾಗುವಂತೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದನಂತೆ.
ಪದೇ ಪದೇ ಮದುವೆಗೆ ಒತ್ತಾಯ ಮಾಡುತ್ತಿದ್ದುದಲ್ಲದೇ ಮತ್ತೆ ಮತ್ತೆ ಕರೆದು ಲೈಂಗಿಕ ಸುಖ ಪಡೆದುಕೊಳ್ಳುತ್ತಿದ್ದ ಅಂತ ಯುವತಿ ದೂರಿದ್ದಾಳೆ.
ಆರೋಪಿಯ ಕಿರುಕುಳ ಹೆಚ್ಚಾದಾಗ ಪೊಲೀಸರಿಗೆ ದೂರು ನೀಡಿದ್ದಾಳೆ. ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.