Select Your Language

Notifications

webdunia
webdunia
webdunia
webdunia

50 ರೂಪಾಯಿ ನೋಟಿನ ಆಸೆ ತೋರಿಸಿ 12 ಲಕ್ಷ ರೂ ಎಗರಿಸಿದ ಕಳ್ಳರು

50 ರೂಪಾಯಿ ನೋಟಿನ ಆಸೆ ತೋರಿಸಿ 12 ಲಕ್ಷ ರೂ ಎಗರಿಸಿದ ಕಳ್ಳರು
ಬೀದರ್ , ಗುರುವಾರ, 3 ನವೆಂಬರ್ 2016 (15:20 IST)
50 ರೂಪಾಯಿ ನೋಟು ಕೆಳಗೆ ಬಿದ್ದಿದೆ ಎಂದು ವ್ಯಕ್ತಿಯೊಬ್ಬನಿಗೆ ತೋರಿಸಿ, ಅದನ್ನು ಎತ್ತಿಕೊಳ್ಳಲು ಹೋದಾಗ 12 ಲಕ್ಷ ರೂಪಾಯಿ ಹಣದ ಬ್ಯಾಗ್‌ನ್ನು ಎಗರಿಸಿ ಇಬ್ಬರು ಕಳ್ಳರು ಪರಾರಿಯಾಗಿದ್ದಾರೆ.
 
ನಗರದ ನಾವದಗೇರಿಯ ನಿವಾಸಿಯಾದ ಪಾಂಡುರಂಗ ವಜ್ರೇ ಕೆಎಸ್‌ಆರ್‌ಟಿಸಿ ನಿವೃತ್ತ ಚಾಲಕರಾಗಿದ್ದು, ನಿವೇಶನ ಖರೀದಿಗಾಗಿ ಬ್ಯಾಂಕ್‌ನಿಂದ 12 ಲಕ್ಷ ರೂ.ಹಣವನ್ನು ಡ್ರಾ ಮಾಡಿಕೊಂಡು ತಮ್ಮ ದ್ವಿಚಕ್ರ ವಾಹನದಲ್ಲಿ ಹೊರಟಿದ್ದರು. ಇದೇ ಸಂದರ್ಭದಲ್ಲಿ ಇಬ್ಬರು ಆರೋಪಿಗಳು ನಿಮ್ಮ 50 ರೂಪಾಯಿ ನೋಟು ಬಿದ್ದಿದೆ ಎಂದು ಹೇಳಿದ್ದಾರೆ.
 
ಇದರಿಂದ ಆತಂಕಗೊಂಡ ಪಾಂಡುರಂಗ ವಜ್ರೆ ಬೈಕ್‌ನಿಂದಿಳಿದು 50 ರೂಪಾಯಿ ನೋಟು ಎತ್ತಿಕೊಳ್ಳಲು ಬಗ್ಗಿದಾಗ ಬೈಕ್‌ನಲ್ಲಿದ್ದ 12 ಲಕ್ಷ ರೂಪಾಯಿಗಳಿದ ಹಣದ ಬ್ಯಾಗ್‌ ಎತ್ತಿಕೊಂಡು ಪರಾರಿಯಾಗಿದ್ದಾರೆ.
 
ಕೂಡಲೇ ವಜ್ರೇ, ಕಳ್ಳರನ್ನು ಹಿಡಿಯುವಂತೆ ಜೋರಾಗಿ ಕೂಗಿದಾಗ ಕಳ್ಳರು ಸಂದಿ ಗೊಂದಿಗಳಲ್ಲಿ ಓಡಿ ಪರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಜಾಲ ಬೀಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಟಿಪ್ಪು ಜಯಂತಿ ಸಭೆ: ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರ ಸೆರೆ