Publish Date: Fri, 18 Feb 2022 (14:03 IST)
Updated Date: Fri, 18 Feb 2022 (15:06 IST)
ಬೆಂಗಳೂರು ಹೊರ ವಲಯದ ದೊಮ್ಮಸಂದ್ರ ಮುಖ್ಯರಸ್ತೆ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದ್ದು, ವಾಹನ ಸವಾ ರರು ಹೈರಾಣಾಗಿ ಹೋಗಿದ್ದಾರೆ. ಆನೇಕಲ್ ತಾಲೂಕಿನ ವರ್ತೂರು ಹಾಗೂ ದೊಮ್ಮಸಂದ್ರ ಮುಖ್ಯ ರಸ್ತೆಯ ಕಾಮಗಾರಿ ಆಮೆಗ ತಿಯಲ್ಲಿ ಸಾಗುತ್ತಿದ್ದು, ಹೀಗಾಗಿ ವಾಹನ ಸವಾರರು ಪ್ರತಿನಿತ್ಯ ಪರದಾಡುವ ಪರಿಸ್ಥಿತಿ ಎದುರಾಗಿದೆ.
ಕಿರಿದಾದ ರಸ್ತೆಯಿಂದಾಗಿ ಅಧಿಕಾರಿಗಳಿಗೆ ವಾಹನ ಸವಾರರು ಹಿಡಿಶಾಪ ಹಾಕುತ್ತಿದ್ದು, ಆದಷ್ಟು ಬೇಗ ರಸ್ತೆಯನ್ನು ಸರಿಪಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಜನರು ಆಗ್ರಹ ಮಾಡಿದ್ದಾರೆ.