Publish Date: Wed, 10 Oct 2018 (14:34 IST)
Updated Date: Wed, 10 Oct 2018 (14:36 IST)
ರಸ್ತೆ ದುರಸ್ಥಿ ಮಾಡಿಸಿಕೊಡಿ ಎಂದು ಗ್ರಾಮ ಪಂಚಾಯಿತಿಗೆ ಆಗ್ರಹ, ಮನವಿ ಮಾಡಿದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಮಹಿಳೇಯರೇ ರಸ್ತೆ ದುರಸ್ಥಿಮಾಡಿಕೊಂಡಿರುವ ಘಟನೆ ನಡೆದಿದೆ.
ಹಾಳಾಗಿರುವ ರಸ್ತೆ ದುರುಸ್ತಿ ಕಾರ್ಯವನ್ನು ಮಹಿಳೆಯರು ಕೈಗೊಂಡ ಘಟನೆ ನಡೆದಿದೆ. ಹದಗೆಟ್ಟ ರಸ್ತೆ ಸರಿ ಪಡಿಸಯವಂತೆ ಗ್ರಾಮ ಪಂಚಾಯತ್ ಗೆ ಆಗ್ರಹಿಸಿದರೂ ಪ್ರತಿಕ್ರಿಯೆ ನೀಡದ ಹಿನ್ನಲೆಯಲ್ಲಿ ಕೈಯಲ್ಲಿ ಬುಟ್ಟಿ, ಗುದ್ದಲಿ ಹಿಡಿದು ರಸ್ತೆ ದುರುಸ್ತಿಯನ್ನು ಮಹಿಳೆಯರು ಮಾಡಿದ್ದಾರೆ.
ಕಾರವಾರದ ಮಾಜಾಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಠಾರ ರಸ್ತೆಯನ್ನು ಮಹಿಳೆಯರು ದುರಸ್ತಿ ಮಾಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮಾಜಾಳಿದ ಮಹಿಳೆಯರು ಇವರಾಗಿದ್ದಾರೆ. ಮಹಿಳೆಯರೆ ಸೇರಿ ಕೊಂಡು ಹದಗೆಟ್ಟ ರಸ್ತೆಗೆ ಜಲ್ಲಿ ಕಲ್ಲು ಹಾಕಿ ಹೊಂಡ ಮುಚ್ಚಿದ ಘಟನೆ ನಡೆದಿದೆ. ಮಹಿಳೆಯರ ನೆರವಿಗೆ ಬಂದ ಗ್ರಾಮಸ್ಥರು ಕೂಡ ರಸ್ತೆ ದುರಸ್ಥಿಗೆ ಕೈಜೋಡಿಸಿದರು.