Select Your Language

Notifications

webdunia
webdunia
webdunia
webdunia

ಕಾವೇರಿ ತೀರದಲ್ಲಿ ಅಮ್ಮ ಜಯಲಲಿತಾಗಾಗಿ ವಾಮಾಚಾರ!

ಕಾವೇರಿ ನದಿ
ಬೆಂಗಳೂರು: ತಮಿಳುನಾಡಿನಲ್ಲಿ ಒಂದಾದ ಮೇಲೊಂದು ದುರಂತಗಳು ನಡೆಯುತ್ತಲೇ ಇವೆ. ಜಯಲಲಿತಾ ಸಾವಿನ ನಂತರವಂತೂ ಪರಿಸ್ಥಿತಿ ಹದಗೆಟ್ಟಿದೆ. ಇದಕ್ಕೆಲ್ಲಾ ಕಾರಣ ಕಾವೇರಿ ಮಾತೆಯ ಶಾಪವಂತೆ. ಅದಕ್ಕಾಗಿ ಕಾವೇರಿ ತೀರದಲ್ಲಿ ವಾಮಾಚಾರ ಮಾಡಲಾಗಿದೆ!
 

ಜಯಲಲಿತಾ ಸಾವಿಗೆ, ತಮಿಳುನಾಡಿನ ಇಂದಿನ ಪರಿಸ್ಥಿತಿಗೆ ಕಾವೇರಿ ಮಾತೆಯ ಶಾಪ ಕಾರಣ ಎಂದು ಯಾರೋ ರಾತ್ರೋ ರಾತ್ರಿ ಕಾವೇರಿ ಅಣೆಕಟ್ಟಿನ ಪ್ರದೇಶದಲ್ಲಿ ವಾಮಾಚಾರ ಮಾಡಿದ್ದಾರೆ. ಇಲ್ಲಿ ಗಾಜಿನ ಬಳೆ, ಕುಂಕುಮ, ನಿಂಬೆ ಹಣ್ಣು ಸ್ಥಳೀಯರ ಕಣ್ಣಿಗೆ ಬಿದ್ದಿದೆ.

ಆದರೆ ಇಷ್ಟೆಲ್ಲಾ ಆದರೂ ಕಾವೇರಿ ಭದ್ರತಾ ಸಿಬ್ಬಂದಿಗೆ ಗೊತ್ತೇ ಆಗಿಲ್ಲ ನೋಡಿ! ರಾತ್ರೋ ರಾತ್ರಿ ಇಷ್ಟೆಲ್ಲಾ ಆದರೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲವೇಕೆ ಎಂಬುದೇ ಸ್ಥಳೀಯರ ಪ್ರಶ್ನೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮೀಸಲು ಕೊಡದಿದ್ದರೆ ಮೇಲ್ಮನವಿ ಸಲ್ಲಿಸುತ್ತೇವೆ: ಸಚಿವ ಆಂಜನೇಯ