Select Your Language

Notifications

webdunia
webdunia
webdunia
webdunia

ಟವಲ್‌ನಿಂದ ಬಿಗಿದು ನಿವೃತ್ತ ತಹಶೀಲ್ದಾರ್ ಬರ್ಬರ ಹತ್ಯೆ!

ನಿವೃತ್ತ
ಬಳ್ಳಾರಿ , ಶುಕ್ರವಾರ, 30 ಡಿಸೆಂಬರ್ 2016 (10:15 IST)
ನಿವೃತ್ತ ತಹಶೀಲ್ದಾರ್ ಅವರ ಕುತ್ತಿಗೆಗೆ ಟವಲ್‌ನಿಂದ ಬಿಗಿದು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಂಜನಗಾಂಧಿ ಪಾಲಿಟಿಕ್ನಿಕ್ ಕಾಲೇಜು ಬಳಿ ನಡೆದಿದೆ. 
ನಿವೃತ್ತ ತಹಶೀಲ್ದಾರ್ ರಾಮಮೂರ್ತಿ (66) ಮನೆಯಲ್ಲಿ ಏಕಾಂಗಿಯಾಗಿದ್ದ ಸಮಯದಲ್ಲಿ ಬಂದ ದುಷ್ಕರ್ಮಿಗಳು ಕುತ್ತಿಗೆಗೆ ಟವಲ್ ಬಿಗಿದು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದಾರೆ. ಆದರೆ, ಕೊಲೆಗೆ ಯಾವುದೇ ನಿಖರ ಕಾರಣ ತಿಳಿದು ಬಂದಿಲ್ಲ. 
 
ಸ್ಥಳಕ್ಕೆ ಕೌಲ್ ಬಜಾರ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. 
 
ನಿವೃತ್ತ ತಹಶೀಲ್ದಾರ್ ರಾಮಮೂರ್ತಿ ಅವರ ಪತ್ನಿ ಮೃತಪಟ್ಟಿದ್ದರು, ಬಳಿಕ ರಾಮಮೂರ್ತಿ ಸಂಜಯಗಾಂಧಿನಗರದಲ್ಲಿ ಪುತ್ರಿಯೊಂದಿಗೆ ವಾಸವಾಗಿದ್ದರು. ಈ ಬಗ್ಗೆ ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಸಿದ್ದರಾಮಯ್ಯ ಬಲ್ಡೋಟಾ ಉದ್ಯಮಿಯಿಂದ ಕಪ್ಪು ಹಣ ಪಡೆದಿದ್ದಾರೆ: ಜಗದೀಶ್ ಶೆಟ್ಟರ್