Select Your Language

Notifications

webdunia
webdunia
webdunia
webdunia

ರೆಸಾರ್ಟ್ ರಾಜಕಾರಣ ಪ್ರಜಾಪ್ರಭುತ್ವಕ್ಕೆ ವಿರೋಧ: ಅನಂತ್‌ಕುಮಾರ್

ರೆಸಾರ್ಟ್ ರಾಜಕಾರಣ ಪ್ರಜಾಪ್ರಭುತ್ವಕ್ಕೆ ವಿರೋಧ: ಅನಂತ್‌ಕುಮಾರ್
ಬೆಂಗಳೂರು , ಭಾನುವಾರ, 30 ಜುಲೈ 2017 (11:44 IST)
ಕಾಂಗ್ರೆಸ್ ಪಕ್ಷ ರೆಸಾರ್ಟ್ ರಾಜಕಾರಣಕ್ಕೆ ಮುಂದಾಗಿರುವುದು ಪ್ರಜಾಪ್ರಭುತ್ವಕ್ಕೆ ವಿರೋಧವಾಗಿದೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೇಳಿದ್ದಾರೆ.
 
ಗುಜರಾತ್‌ನ ಕಾಂಗ್ರೆಸ್ ಶಾಸಕರನ್ನು ನಗರದ ಈಗಲ್‌ಟೌನ್ ರೆಸಾರ್ಟ್‌ನಲ್ಲಿ ಬಲವಂತವಾಗಿ ಕೂಡಿಹಾಕಲಾಗಿದೆ. ಇದು ಯಾವ ಸೀಮೆ ಪ್ರಜಾಪ್ರಭುತ್ವ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 
ಬಿಜೆಪಿ ಪಕ್ಷವನ್ನು ಸೇರಲು ಕಾಂಗ್ರೆಸ್ ಶಾಸಕರು ಉತ್ಸಕರಾಗಿದ್ದಾರೆಯೇ ಹೊರತು ಬಿಜೆಪಿ ಯಾವುದೇ ಶಾಸಕರನ್ನು ಖರೀದಿಸಲು ಪ್ರಯತ್ನಿಸುತ್ತಿಲ್ಲ. ಬಿಜೆಪಿಯ ಆಪರೇಶನ್ ಕಮಲ ಕೇವಲ ವದಂತಿ ಎಂದು ತಿಳಿಸಿದ್ದಾರೆ.
 
ಗುಜರಾತ್‌ನಲ್ಲಿ ಆರು ಶಾಸಕರು ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರಿಂದ ಆತಂಕಗೊಂಡ ಕಾಂಗ್ರೆಸ್ ಹೈಕಮಾಂಡ್, ಕಾಂಗ್ರೆಸ್ ಶಾಸಕರನ್ನು ಬೆಂಗಳೂರಿಗೆ ಕಳುಹಿಸಿದೆ ಎನ್ನಲಾಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಬಂಡಾಯ ಶಾಸಕರಿಗೆ ಪಾಠ ಕಲಿಸಲು ದೇವೇಗೌಡರ ಸಮರ ತಂತ್ರ