Publish Date: Fri, 31 Jul 2026 (17:52 IST)
Updated Date: Fri, 31 Jul 2026 (17:57 IST)
ನವದೆಹಲಿ: ತಮಿಳುನಾಡಿಗೆ ನೀರು ಬಿಡುವುದಕ್ಕಿಂತ ಜನರ ಕುಡಿಯುವ ನೀರಿಗಾಗಿ ಕಾವೇರಿಯನ್ನು ಕಾಯ್ದಿರಿಸುವುದು ನಮ್ಮ ಆದ್ಯತೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ನವದೆಹಲಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಅಭಾವ ಉಂಟಾದಾಗಲೆಲ್ಲಾ ನೀರಿನ ವಿವಾದ ಏಳುವುದು ಸಾಮಾನ್ಯ. ಆಗಸ್ಟ್ 2ರಂದು ನಡೆಯಲಿರುವ ಸರ್ವಪಕ್ಷ ಸಭೆಯಲ್ಲಿ ನಾವು ದೃಢವಾದ ನಿಲುವು ಹೇಳುತ್ತೇವೆ. ದೇಶದಲ್ಲಿ ಎರಡು ರೀತಿಯ ಮುಂಗಾರುಗಳಿವೆ. ಕರ್ನಾಟಕವು ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ನೈಋತ್ಯ ಮುಂಗಾರಿನಿಂದ ಮಳೆ ಪಡೆಯುತ್ತದೆ. ಆದರೆ, ಸೆಪ್ಟೆಂಬರ್ ನಂತರ ತಮಿಳುನಾಡು ಈಶಾನ್ಯ ಮುಂಗಾರಿನಿಂದ ಮಳೆ ಪಡೆಯುತ್ತದೆ. ಒಮ್ಮೆ ನೀರು ತಮಿಳುನಾಡಿಗೆ ಹರಿದು ಹೋದರೆ, ಅದನ್ನು ಮತ್ತೆ ಕರ್ನಾಟಕಕ್ಕೆ ಪಡೆಯಲು ಸಾಧ್ಯವಿಲ್ಲ ಎಂದರು.
ಇನ್ನೂ ತಮಿಳುನಾಡಿ ಕಾವೇರಿ ನೀರನ್ನು ಕೃಷಿ ಹಾಗೂ ನೀರಾವರಿ ಉದ್ದೇಶಕ್ಕೆ ಕೇಳುತ್ತಿದ್ದು, ಕರ್ನಾಟಕವು ತನ್ನ ಜನರ ಮೂಲಭೂತ ಕುಡಿಯುವ ನೀರಿನ ಅಗತ್ಯಕ್ಕಾಗಿ ಹೋರಾಡುತ್ತಿದೆ. ಕಾವೇರಿ ನ್ಯಾಯಾಧಿಕಾರದ ಆದೇಶದಂತೆ ರಚನೆಯಾಗಿರುವ ಪ್ರಾಧಿಕಾರಗಳು ಮತ್ತು ಸಮಿತಿಗಳು ಕರ್ನಾಟಕದಲ್ಲಿ ಉಂಟಾಗಿರುವ ನೀರಿನ ಅಭಾವ ಹಾಗೂ ಕೊರತೆಯನ್ನು ಸರಿಯಾಗಿ ಗುರುತಿಸುವಲ್ಲಿ ವಿಫಲ ಆಗಿದೆ ಎಂದು ಗುಡುಗಿದರು.
About Writer
ಸಂಪ್ರಿಯ
ಕನ್ನಡ ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷದಲ್ಲಿ ಬೇರೆ ಬೇರೆ ಸಂಸ್ಥೆಗಳಲ್ಲಿ ರಿಪೋರ್ಟರ್ ಆಗಿ, ಸಬ್ ಎಡಿಟರ್ ಆಗಿ, ಇದೀಗ ಕಂಟೆಂಟ್ ರೈಟರ್ ಆಗಿ ವೆಬ್ದುನಿಯಾದಲ್ಲಿ ಕೆಲಸ. ಆಳ್ವಾಸ್ ಕಾಲೇಜಿನಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋಧ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು 2016ನೇ ಸಾಲಿನಲ್ಲಿ ಪಡೆದಿರುತ್ತೇನೆ. ಮನರಂಜನೆ, ಲೈಫ್ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ವಿಶೇಷ ಆಸಕ್ತಿ. ....
ಮತ್ತಷ್ಟು ಓದಿ