Publish Date: Sat, 18 Mar 2023 (11:30 IST)
Updated Date: Sat, 18 Mar 2023 (11:44 IST)
ಪ್ಲಾಸ್ಟಿಕ್ ಸೇವಿಸಿ ರಸ್ತೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ಹೋರಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ.. ಬಾಗಲಕೋಟೆಯ ವಿನಾಯಕ ನಗರದಲ್ಲಿ ಎತ್ತೊಂದು ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿತ್ತು. ಇದನ್ನು ಸ್ಥಳೀಯರು ಗಮನಿಸಿ, ತುರ್ತು ಚಿಕಿತ್ಸಾ ಸಹಾಯವಾಣಿಗೆ ಕರೆ ಮಾಡಿದ್ದಾರೆ.. ಸ್ಥಳಕ್ಕೆ ದೌಡಾಯಿಸಿದ ಬಾಗಲಕೋಟೆ ಪಶು ಚಿಕಿತ್ಸಾ ವೈದ್ಯರ ತಂಡ ಹೋರಿಗೆ ಚಿಕಿತ್ಸೆ ನೀಡಿದೆ.. ಗಂಟಲಿನಲ್ಲಿ ಪ್ಲಾಸ್ಟಿಕ್ ಸಿಕ್ಕಿ ಹಸು ನರಳಾಡಿದ್ದು, ರಕ್ಷಣೆ ಮಾಡಲಾಗಿದೆ. ಸ್ಥಳೀಯ ಯುವಕರ ಸಹಾಯದಿಂದ ಪಶುವೈದ್ಯರಿಂದ ಚಿಕಿತ್ಸೆ ನೀಡಲಾಗಿದೆ.