Webdunia - Bharat's app for daily news and videos

Install App

ಪೊಲೀಸರ ಮುಂದೆ ದರ್ಶನ್ ಆಂಡ್ ಗ್ಯಾಂಗ್ ನೀಡಿದ ತಪ್ಪೊಪ್ಪಿಗೆ ವಿವರ ಇಲ್ಲಿದೆ

Krishnaveni K
ಶುಕ್ರವಾರ, 14 ಜೂನ್ 2024 (10:47 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಮತ್ತು ಗ್ಯಾಂಗ್ ಪೊಲೀಸರ ಮುಂದೆ ನೀಡಿದ ತಪ್ಪೊಪ್ಪಿಗೆ ಹೇಳಿಕೆ ವಿವರ ಲಭ್ಯವಾಗಿದೆ. ದರ್ಶನ್, ಪವಿತ್ರಾ ಗೌಡ, ರಾಘವೇಂದ್ರ ಸೇರಿದಂತೆ ಪ್ರಮುಖ ಆರೋಪಿಗಳು ತಮ್ಮ ಹೇಳಿಕೆ ನೀಡಿದ್ದಾರೆ.

ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಪವಿತ್ರಾ ‘ನನಗೆ ಬಂದ ಎಲ್ಲಾ ಅಶ್ಲೀಲ ಸಂದೇಶಗಳನ್ನು ನನ್ನ ಆಪ್ತ ಪವನ್ ಗೆ ಕಳುಹಿಸಿದ್ದೆ. ಅದನ್ನು ಯಾವುದೇ ಕಾರಣಕ್ಕೂ ದರ್ಶನ್ ಗೆ ತೋರಿಸಬೇಡ ಎಂದಿದ್ದೆ. ಆದರೆ ಪವನ್ ಇದನ್ನು ದರ್ಶನ್ ಗೆ ಹೇಳಿದ್ದ. ಇದರಿಂದಲೇ ಅನಾಹುತವಾಯ್ತು. ಕೊಲೆ ಮಾಡ್ತಾರೆ ಎನ್ನುವ ಕಲ್ಪನೆಯೂ ನನಗಿರಲಿಲ್ಲ. ರೇಣುಕಾಸ್ವಾಮಿ ಬಂದಾಗ ನಾನು ಅಲ್ಲಿಗೆ ಹೋಗಿ ಆತನಿಗೆ ಚಪ್ಪಲಿ ಏಟು ಕೊಟ್ಟು ವಾಪಸ್ ಬಂದಿದ್ದೆ. ಆಮೇಲೇನಾಯ್ತು ಎಂದು ನನಗೆ ಗೊತ್ತಿಲ್ಲ’ ಎಂದಿದ್ದಾರೆ.

ಇನ್ನು ಎ2 ಆರೋಪಿಯಾಗಿರುವ ನಟ ದರ್ಶನ್ ‘ನಾನು ಶೆಡ್ ಗೆ ಹೋಗಿದ್ದು ನಿಜ. ರೇಣುಕಾಸ್ವಾಮಿಗೆ ಎರಡು ಬಾರಿಸಿದ್ದೆ. ಇನ್ಮುಂದೆ ಈ ರೀತಿ ಮಾಡಿದರೆ ಸರಿ ಇರಲ್ಲ ಎಂದು ಎಚ್ಚರಿಕೆ ಕೊಟ್ಟೆ. ಬಳಿಕ ಅವನಿಗೆ ಹಣ ಕೊಟ್ಟು ಊಟ ಮಾಡಿಕೊಂಡು ಊರಿಗೆ ಮರಳುವಂತೆ ಹೇಳಿ ಅಲ್ಲಿಂದ ತೆರಳಿದ್ದೆ. ಆಮೇಲೆ ಏನಾಯ್ತು ನನಗೆ ಗೊತ್ತಿಲ್ಲ’ ಎಂದಿದ್ದಾರೆ.

ಇನ್ನು ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಕರೆತಂದಿದ್ದ ಆರೋಪಿ ರಾಘವೇಂದ್ರ ‘ಅಣ್ಣ ಫೋನ್ ಮಾಡಿ ರೇಣುಕಾಸ್ವಾಮಿಯನ್ನು ಕರೆತರಲು ಹೇಳಿದ್ದರು. ಅದರಂತೆ ಆತನನ್ನು ಪತ್ತೆ ಮಾಡಿ ಎರಡು ದಿನ ಆತನ ಚಲನವಲನವನ್ನು ಗಮನಿಸಿದ್ದೆ. ಬಳಿಕ ಆತನನ್ನು ಚಿತ್ರದುರ್ಗದಿಂದ ಕಾರಿನಲ್ಲಿ ಕರೆತಂದು ಅಣ್ಣನ ಮುಂದೆ ನಿಲ್ಲಿಸಿದ್ದೆ’ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಆರ್ ಎಸ್ಎಸ್ ವಿಷವಿದ್ದಂತೆ ಎಂದ ಮಲ್ಲಿಕಾರ್ಜುನ ಖರ್ಗೆ: ವಿಷ ಹಾಕಿದವರು ನೀವು ಎಂದ ವಿಜಯೇಂದ್ರ

ನಾಲ್ವಡಿ ಒಡೆಯರ್ ಎಲ್ಲಿ, ಗುಲಾಮಗಿರಿ ಮಾಡ್ತಿರುವ ನಿಮ್ಮಪ್ಪ ಸಿದ್ದರಾಮಯ್ಯ ಎಲ್ಲಿ: ಆರ್ ಅಶೋಕ್

ಮೋದಿ ದೊಡ್ಡ ಪ್ರಾಬ್ಲಂ ಅಲ್ಲ, ಅವರನ್ನು ನಾನು ಎರಡು ಸಲ ಮೀಟ್ ಮಾಡಿದ್ದೇನೆ: ರಾಹುಲ್ ಗಾಂಧಿ

ಶಿವನ ಹಾಡು ಹಾಡುವ ಈ ಮಗುವಿನ ವಿಡಿಯೋ ನೋಡಿದ್ರೆ ನಗು ಬರುತ್ತೆ

Karnataka Rains: ವೀಕೆಂಡ್ ನಲ್ಲಿ ಮಳೆ ಬರಲಿದೆಯಾ ಇಲ್ಲಿದೆ ಇಂದಿನ ಹವಾಮಾನ ವರದಿ

ಮುಂದಿನ ಸುದ್ದಿ
Show comments