Webdunia - Bharat's app for daily news and videos

Install App

ಬೆಳಗಾವಿಯಲ್ಲಿ ನೇಹಾ ಹಿರೇಮಠ್ ಹತ್ಯೆ ನೆನೆದು ಕಾಂಗ್ರೆಸ್ ವಿರುದ್ಧ ಗುಡುಗಿದ ಮೋದಿ

Sampriya
ಭಾನುವಾರ, 28 ಏಪ್ರಿಲ್ 2024 (12:49 IST)
photo Courtesy X
ಬೆಳಗಾವಿ: ಲೋಕಸಭೆ ಚುನಾವಣೆ ಹಿನ್ನೆಲೆ ಬೆಳಗಾವಿಯಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಸ್ನೇಹಿತನಿಂದಲೇ ಹತ್ಯೆಗೀಡಾದ ನೇಹಾ ಹಿರೇಮಠ್ ಪ್ರಕರಣದಲ್ಲಿ ಕಾಂಗ್ರೆಸ್ ಅನ್ಯಾಯ ಎಸಗಿದೆ ಎಂದು ಗುಡುಗಿದರು.

ಕಾಂಗ್ರೆಸ್ ಆಡಳಿತದಲ್ಲಿ ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದೆ. ಬೆಳಗಾವಿಯಲ್ಲಿ ಆದಿವಾಸಿ ಸಹೋದರಿ ಜೊತೆ ಅನ್ಯಾಯ ಆಗಿದೆ. ಚಿಕ್ಕೋಡಿಯ ಘಟನೆ ನಾಚಿಕೆಪಡುವಂಥಾ ಕೃತ್ಯವಾಗಿದೆ. ಅದಲ್ಲದೆ ಸ್ನೇಹಿತನಿಂದಲೇ ಕಾಲೇಜು ಆವರಣದಲ್ಲಿ ವಿದ್ಯಾರ್ಥಿನಿಯನ್ನು ಹತ್ಯೆಯಾಗಿದ್ದು, ಇವೆಲ್ಲ ಕರ್ನಾಟಕದ ಪ್ರತಿಷ್ಠೆಯನ್ನು ಮಣ್ಣು ಪಾಲಾಗಿಸುವ ಘಟನೆ ಎಂದರು.

ಇನ್ನೂ ಹತ್ಯೆಗೀಡಾದ ಣೇಹಾ ಪ್ರಕರಣದ ಆಕೆ ಪೋಷಕರು ನ್ಯಾಯ ಕೇಳಿದ್ರೆ ಆದರೆ ಕಾಂಗ್ರೆಸ್ ತುಷ್ಟೀಕರಣಕ್ಕೆ ಮುಂದಾಗಿದೆ. ಕಾಂಗ್ರೆಸ್‌ಗೆ ಕಾನೂನು ವಿಚಾರದಲ್ಲಿ ಗಂಭೀರತೆ ಇಲ್ಲ. ಬೆಂಗಳೂರಿನ ರಾಮೇಶ್ವರ ಬಾಂಬ್​ ಬ್ಲಾಸ್ಟ್ ಅನ್ನು ಸಿಲಿಂಡರ್ ಸ್ಪೋಟ ಎಂದು ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಿದರು. ಕಾಂಗ್ರೆಸ್‌ನವರಿಗೆ ರಾಜ್ಯದಲ್ಲಿ ಕಾನೂನು ಕಾಪಾಡಲು ಆಗದಿದ್ದರೆ ಅಧಿಕಾರ ಬಿಟ್ಟು ತೊಲಗಿ ಎಂದು ಗುಡುಗಿದರು.

ಶಿವಾಜಿ, ಚೆನ್ನಮ್ಮ ದೇಶಭಕ್ತಿ ಇಂದಿಗೂ ಪ್ರೇರಕವಾಗಿದೆ. ಮೈಸೂರು ರಾಜಮನೆತನವನ್ನ ದೇಶ ಹೆಮ್ಮೆಯಿಂದ ನೋಡುತ್ತದೆ ಯುವರಾಜನ ಹೇಳಿಕೆ ವೋಟ್‌ ಬ್ಯಾಂಕ್ ರಾಜಕಾರಣವಾಗಿದೆ. ನವಾಬರು, ನಿಜಾಮರು, ಸುಲ್ತಾನರ ಅತ್ಯಾಚಾರದ ಬಗ್ಗೆ ಮಾತನಾಡಲ್ಲ. ಕಾಂಗ್ರೆಸ್‌ಗೆ ಔರಂಜೇಬನ ಅತ್ಯಾಚಾರ ನೆನಪಾಗಲ್ಲ. ವೋಟ್‌ ಬ್ಯಾಂಕ್‌ಗೆ ರಾಜರ ವಿರುದ್ಧ ಮಾತನಾಡ್ತಾರೆ ಎಂದು ಗುಡುಗಿದರು.

ನವಾಬರು, ಸುಲ್ತಾನರ ವಿರುದ್ಧ ಮಾತನಾಡಲ್ಲ. ಕಾಂಗ್ರೆಸ್‌ನದ್ದು ತುಷ್ಟೀಕರಣದ ಮಾನಸಿಕತೆ. ಕಾಂಗ್ರೆಸ್ ಮಾನಸಿಕತೆ ದೇಶದ ಎದುರು ಬಹಿರಂಗವಾಗಿದೆ. ಕಾಂಗ್ರೆಸ್ ಮಾನಸಿಕತೆ ಪ್ರಣಾಳಿಕೆಯಲ್ಲೂ ಕಂಡು ಬಂದಿದೆ ಎಂದು ಕಿಡಿಕಾರಿದರು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments