ಕಾವೇರಿ ನೀರಿಗಾಗಿ ಹೋರಾಟ, ತಮಿಳುನಾಡಿನ ವಿರುದ್ಧ ಆಕ್ರೋಶ, ಕರ್ನಾಟಕ ಬಂದ್ ಪರಿಣಾಮವಾಗಿ ಸಾಲು ಸಾಲಾಗಿ ರಜೆ ಬಂದರೂ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಬರಲು ತಮಿಳರು ಹಿಂದೇಟು ಹಾಕುತ್ತಿದ್ದಾರೆ. ರೆಸಾರ್ಟ್‌ಗಳಲ್ಲಿ ಬುಕಿಂಗ್ ಕ್ಯಾನ್ಸಲ್ ಮಾಡುತ್ತಿದ್ದಾರೆ.ಗೋಕರ್ಣದ ಎಂಜಿ ಕಾಟೇಜ್ ನಲ್ಲಿ ತಮಿಳುನಾಡಿನ ಪ್ರವಾಸಿಗರ ತಂಡವೊಂದು ಮೂರು ದಿನಗಳ ಕಾಲ ರೂಂ ಬುಕಿಂಗ್ ಮಾಡಿದ್ದರು. ಆದರೆ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ತಮಿಳು ಪ್ರವಾಸಿಗರ ಮೇಲೆ ಆಕ್ರೋಶ ತಿರುಗುವ ಭಯದಿಂದ ಬುಕಿಂಗ್ ರದ್ದುಗೊಳಿಸಿದ್ದು, ತಮಿಳು ಪ್ರವಾಸಿಗರು ರಾಜ್ಯಕ್ಕೆ ಬರಲು ಹಿಂದೇಟು ಹಾಕಿದ್ದಾರೆ