Select Your Language

Notifications

webdunia
webdunia
webdunia
webdunia

ರಾಜಕೀಯ ಪ್ರವೇಶಕ್ಕೆ ರೆಡ್ಡಿ ರಣತಂತ್ರ?

ರಾಜಕೀಯ ಪ್ರವೇಶಕ್ಕೆ ರೆಡ್ಡಿ ರಣತಂತ್ರ?
ಬೆಂಗಳೂರು , ಗುರುವಾರ, 3 ಫೆಬ್ರವರಿ 2022 (09:03 IST)
ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ಮತ್ತೆ ಬಳ್ಳಾರಿ ರಾಜಕೀಯ ಸಂಚಲನ ಮೂಡಿಸಿದೆ.

ಬಿಜೆಪಿಗೆ ಪುನರ್ ಪ್ರವೇಶ ಮಾಡಲು ಜನಾರ್ದನ ರೆಡ್ಡಿ ರಣತಂತ್ರ ಮಾಡುತ್ತಿದ್ದಾರೆ.

ಬಳ್ಳಾರಿಯಲ್ಲಿ ರಹಸ್ಯ ಸಭೆ ಮಾಡಿರುವ ಜನಾರ್ದನ ರೆಡ್ಡಿ ಆಪ್ತ ಸ್ನೇಹಿತ ಶ್ರೀರಾಮುಲು ಮೂಲಕ ಹೈಕಮಾಂಡ್ ಮನವೊಲಿಕೆಗೆ ಯತ್ನ ಮಾಡಿರುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಬಿಜೆಪಿಗೆ ಬರಲು ರೆಡ್ಡಿ ಆಸಕ್ತಿ ತೋರಿದರೂ ಸಕ್ರಿಯ ರಾಜಕೀಯಕ್ಕೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡುವುದು ಅನುಮಾನ ಎನ್ನಲಾಗುತ್ತಿದೆ.

ಜೈಲು ಪಾಲಾಗಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಅವಕಾಶ ಕೊಟ್ಟರೆ ಆದಾಯ ತೆರಿಗೆ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ ಡಿಕೆ ಶಿವಕುಮಾರ್ ವಿರುದ್ಧ ರಾಜಕೀಯ ದಾಳಿಗೆ ಕಷ್ಟವಾಗಬಹುದು. ಜನಾರ್ದನ ರೆಡ್ಡಿಗೆ ಈ ಹಿಂದಿನ ವರ್ಚಸ್ಸು ಉಳಿದಿಲ್ಲ.

ಪ್ರಸ್ತುತ ರೆಡ್ಡಿ ಹಿಂದೆ ದೊಡ್ಡ ಪ್ರಮಾಣದ ವೋಟ್ ಬ್ಯಾಂಕ್ ಇಲ್ಲ. ಅಷ್ಟೇ ಅಲ್ಲದೇ ಸದ್ಯ ಜಾಮೀನು ಮೇಲೆ ರೆಡ್ಡಿ ಹೊರಗಿರುವ ಕಾರಣ ಇತರ ನಾಯಕರು ಬೆಂಬಲಿಸುವುದು ಅನುಮಾನ.


Share this Story:

Follow Webdunia kannada

ಮುಂದಿನ ಸುದ್ದಿ

ಸಂಪುಟ ವಿಸ್ತರಣೆ : ಯಾರೆಲ್ಲ ಸಚಿವಾಕಾಂಕ್ಷಿಗಳು?