Select Your Language

Notifications

webdunia
webdunia
webdunia
webdunia

ರಕ್ತಚಂದನ ಕಳ್ಳಸಾಗಾಣಿಕೆ: ಹಾಟ್ ಮಾಡೆಲ್ ಸಂಗೀತಾ ಬಂಧನ

ರಕ್ತಚಂದನ ಕಳ್ಳಸಾಗಾಣಿಕೆ: ಹಾಟ್ ಮಾಡೆಲ್ ಸಂಗೀತಾ ಬಂಧನ
ಬೆಂಗಳೂರು , ಬುಧವಾರ, 29 ಮಾರ್ಚ್ 2017 (14:07 IST)
25 ವರ್ಷ ವಯಸ್ಸಿನ ನಟಿ ಸಂಗೀತಾ ಚಟರ್ಜಿ ವಿರುದ್ಧ ರಕ್ತಚಂದನ ಸಾಗಾಣಿಕೆಯಲ್ಲಿ ಭಾಗಿಯಾಗಿರುವ ಬಗ್ಗೆ ಸಾಕ್ಷ್ಯಗಳು ದೊರೆತಿರುವುದರಿಂದ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 
ಸಂಗೀತಾ ಪತಿ ಲಕ್ಷ್ಮಣ್ ಡಾಂಗೆ ಅಲಿಯಾಸ್ ತಮಂಗ್ ಲಕ್ಷ್ಮಣ್ ವಿರುದ್ಧ ರಕ್ತಚಂದನ ಕಳ್ಳಸಾಗಾಣಿಕೆ ಕುರಿತಂತೆ ಬೆಂಗಳೂರು, ತಮಿಳುನಾಡು ರಾಜ್ಯಗಳಲ್ಲಿ ಕೇಸ್ ದಾಖಲಾಗಿರುವುದರಿಂದ ಅವರನ್ನು ಕೂಡಲೇ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 
ಚಿಕ್ಕಬಳ್ಳಾಪುರ ಕೋಲಾರ ರಕ್ತಚಂದನ ಕಳ್ಳರ ಗ್ಯಾಂಗ್‌ನಲ್ಲಿ ಲಕ್ಷ್ಮಣ್ ಮತ್ತು ಅವರ ಪತ್ನಿ ಸಂಗೀತಾ ಭಾಗಿಯಾಗಿರುವ ಬಗ್ಗೆ ಪುರಾವೆಗಳು ದೊರೆತಿದ್ದು, ಅವರನ್ನು ವಿಚಾರಣೆಗೊಳಪಡಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ 
 
ಕೆಳೆದ ಕೆಲ ದಿನಗಳ ಹಿಂದೆ ಆರೋಪಿ ಸಂಗೀತಾ, ಹವಾಲಾ ಮೂಲಕ 10 ಕೋಟಿ ರೂಪಾಯಿಗಳನ್ನು ವರ್ಗಾಯಿಸಿದ್ದಾಳೆ. ಆಕೆಯ ಬ್ಯಾಂಕ್ ಖಾತೆಗಳಲ್ಲಿ ಒಂದು ಕೋಟಿಗೂ ಹೆಚ್ಚು ಹಣ ಪತ್ತೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ನಾಳೆಯಿಂದ ಉಪಚುನಾವಣೆಯಲ್ಲಿ ಪ್ರಚಾರ: ಸಿಎಂ ಘೋಷಣೆ