Webdunia - Bharat's app for daily news and videos

Install App

ದಾಖಲೆಗಳನ್ನ ಉಡೀಸ್ ಮಾಡಿದ ರೆಡ್ ರಾಕೆಟ್ ಪರಿವಾಳ

Webdunia
ಗುರುವಾರ, 8 ಜೂನ್ 2023 (19:32 IST)
ಸಾಮಾನ್ಯವಾಗಿ ಪರಿವಾಳವನ್ನ ನೋಡಿರುತ್ತೀರ ಆದ್ರೆ ಇಲ್ಲೊಂದು ಪರಿವಾಳ ಡೆಲ್ಲಿಯಿಂದ ಬೆಂಗಳೂರಿಗೆ ಹಾರಿಕೊಂಡು ಬಂದು ಭಾರತದಲ್ಲಿಯೇ ಹೊಸ ದಾಖಲೆ ನಿರ್ಮಿಸಿದೆ. ಅಷ್ಟೆ ಅಲ್ಲದೇ  ಇತಿಹಾಸ ಸೃಷ್ಟಿಸಿದ  ಮೊದಲ ಪಾರಿವಾಳ  ರೆಡ್ ರಾಕೆಟ್ ಎಂಬ ಖ್ಯಾತಿ ಪಡೆದಿದೆ.
 
ಪಕ್ಷಿಗಳು ಅಂದ್ರೆ ಎಲ್ಲರಿಗೂ  ಇಷ್ಟವಾಗುತ್ತೆ. ಆದ್ರಲ್ಲೂ ಪಕ್ಷಿ ಪ್ರೀಯರಿಗೆ ಅಂತೂ  ಪಕ್ಷಿಗಳ ಮೇಲೆ ಎಲ್ಲಿಲ್ಲದ ಪ್ರೀತಿ ಇರುತ್ತೆ. ಅಂದಹಾಗೆ ಹೀಗೆ ಸುಮಾರು ವರ್ಷದಿಂದ  ಬೆಂಗಳೂರಿನ ಶಂಕರ್ ಅವರು  ಪಾರಿವಾಳ ಸಾಕಿದ್ದಾರೆ. ಹೀಗೆ ಸಾಕುವಾಗ ಆಚಾನಕ್ಕಾಗಿ ಒಂದು ಪರಿವಾಳ ಸಿಗುತ್ತೆ. ಆ ಪರಿವಾಳವನ್ನ ಮನೆಯಲ್ಲಿ ಎಲ್ಲ ಪರಿವಾಳವಂತೆ ಸಾಕುತ್ತಾರೆ. ಆದ್ರೆ ಈ ಪರಿವಾಳ ಶಂಕರ್ ಅವರು ನಿರೀಕ್ಷೆಯೇ ಮಾಡದ ಮಟ್ಟಿಗೆ ದಾಖಲೆ ನಿರ್ಮಿಸುವ ಮೂಲಕ ಸಾಧನೆ ಮಾಡಿದೆ. ಅಂದಹಾಗೆ ಕರ್ನಾಟಕ ಹೋಮಿಂಗ್ ಪಿಜನ್ ಫೆಡರೇಶನ್  ಆಯೋಜನೆ ಮಾಡಿದ್ದ ಸ್ಪರ್ಧೆಯಲ್ಲಿ ಒಟ್ಟು 26 ಪಾರಿವಾಳಗಳನ್ನ ಏಪ್ರಿಲ್ 16 ರಂದು  ದಿಲ್ಲಿ ಯಿಂದ ಹಾರಿಸಲಾಗಿತ್ತು. ಹಾಗೆ ಹಾರಿಸಿದ ಪರಿವಾಳಗಳಲ್ಲಿ ಶಂಕರ್ ರವರು ಸಾಕಿದ ರೆಡ್ ರಾಕೆಟ್ ಪರಿವಾಳ ಒಂದೇ  ಏಪ್ರಿಲ್ 24 ರಂದು ಬೆಂಗಳೂರಿಗೆ ಬಂದು ತಲುಪಿದೆ.
 
ಇದುವರೆಗೆ ಭಾರತದಲ್ಲಿ ಇಷ್ಟು ಕಡಿಮೆ ಸಮಯದಲ್ಲಿ ಇಷ್ಟು ದೂರು ಕ್ರಮಿಸಿರುವ ಪಾರಿವಾಳ ಇದೆ ಮೊದಲು.ಹೀಗೆ ದಾಖಲೆ ಮೂರಿಯುವ ಮೂಲಕ ವಿಜಯ ಸಾಧಿಸಿದ ರೆಡ್ ರಾಕೆಟ್ ಪಾರಿವಾಳದ ಬಗ್ಗೆ ಎಲ್ಲೆಲ್ಲಿಯೂ ಪ್ರಶಾಂಸೆ ವ್ಯಕ್ತವಾಗ್ತಿದೆ. ಪ್ರತಿಬಾರಿಯೂ ದೆಹಲಿಯಲ್ಲಿ  ರೇಸ್  ಆಯೋಜಿಸಲಾಗ್ತಿದೆ. ಆ ರೇಸ್ ನಲ್ಲಿ ಹಲವು ಪರಿವಾಳವನ್ನ ಹಾರಿಬಿಡಲಾಗುತ್ತೆ . ಹಾಗೆ ಬಿಡುವ ಪರಿವಾಳಗಳು ಹೇಗೆ ಅತಿವೇಗವಾಗಿ ಓಡಿ ಸಾಧನೆ ಮಾಡುತ್ತೆ ಅನ್ನುವುದೇ ಪ್ರಶ್ನೆ . ಹೀಗೆ ಹಲವು ಕಂಪನಿಗಳ ಪರಿವಾಳಗಳು ರೇಸ್ ಸ್ಪರ್ಧೇಯಲ್ಲಿ ಭಾಗವಹಿಸುತ್ತದೆ.ಹಾಗೆ ಭಾಗವಹಿಸಿದ ಪರಿವಾಳಗಳಲ್ಲಿ ರೆಡ್ ರಾಕೆಟ್ ಪರಿವಾಳ ಕೇವಲ 9 ದಿನದಲ್ಲಿ ಬೆಂಗಳೂರಿನ ಕೊರಮಂಗಲದ ತನ್ನ ಗುಡಿಗೆ ಸೇರಿಕೊಂಡು ಹೊಸ ದಾಖಲೆ ಸೃಷ್ಠಿ ಮಾಡಿದೆ. ಇನ್ನು ರೆಡ್ ರಾಕೆಟ್ ಪರಿವಾಳ ಮರಳಿ ತನ್ನ ಗುಡು ಸೇರಿರುವುದರ ಬಗ್ಗೆ ರೆಡ್ ರಾಕೆಟ್ ಪರಿವಾಳದ ಶಂಕರ್ ಖುಷಿ ವ್ಯಕ್ತಪಡಿಸಿದ್ದಾರೆ. 
 
ಇನ್ನು ನವೀನ್ ಮತ್ತು ಶಂಕರ್ ಇಬ್ಬರು ಪಕ್ಷಿ ಪ್ರೀಯರು ಚಿಕ್ಕದಿನಿಂದ ಪರಿವಾಳಗಳನ್ನ ಸಾಕುತ್ತಾ  ರೇಸ್ ಗೆ ಸಜ್ಜುಮಾಡ್ತಾರೆ. ಹೀಗಾಗಿ ಇವರು ತಮ್ಮ ಮನೆಯಲ್ಲಿ ವಿವಿಧ ತಾಳಿಯ ಪರಿವಾಳಗಳನ್ನ ಸಾಕುತ್ತಿದ್ದಾರೆ. ಅದಕ್ಕೆ ಬೇಕಾದಂತಹ ಫುಡ್ ಗಳನ್ನ ಹಾಕುತ್ತಾ ರಕ್ಷಣೆ ಮಾಡ್ತಿದ್ದಾರೆ. ಹಾಗೆ ಪ್ರತಿವರ್ಷ ಡಿಸಂಬರ್ ನಲ್ಲಿ ನಡೆಯುವ ಸ್ಪರ್ಧೆಗೆ ಪಕ್ಷಿಗಳನ್ನ ಸಜ್ಜುಮಾಡ್ತಾರೆ. ಹೀಗೆ ಸಜ್ಜು ಮಾಡಿದ ಪಕ್ಷಿಗಳಲ್ಲಿ  ರೆಡ್ ರಾಕೆಟ್ ಪರಿವಾಳವು ಒಂದು ಈ ಪರಿವಾಳ ದಾಖಲೆ ನಿರ್ಮಾಣ ಮಾಡಿದ್ದು ರೇಸ್ ನಲ್ಲಿ 2 ನೇ ಸ್ಥಾನ ಪಡೆದುಕೊಂಡಿದೆ . ಇನ್ನು ಈ ಬಾರಿ ಡಿಸಂಬರ್ ತಿಂಗಳಿ ನಲ್ಲಿ ನಡೆಯುವ ಕರ್ನಾಟಕ ಹೋಮಿಂಗ್ ಫೀಜನ್ ಫೆಡರೇಷನ್ ರೇಶ್ ಗೆ ಈ ರೆಡ್ ರಾಕೆಟ್ ಪರಿವಾಳ ದಾಖಲೆ ನಿರ್ಮಿಸಲು ಸಜ್ಜಾಗ್ತಿದೆ.
 
ಎಲ್ಲಿ ಬಿಟ್ರು ರಾಕೆಟ್ ಸ್ಪೀಡ್  ನಲ್ಲಿ ಹಾರಿಕೊಂಡು ಬಂದು ಪರಿವಾಳ ತನ್ನ ಗೂಡು ಸೇರುತ್ತೆ. ಈ ಪರಿವಾಳವನ್ನ ಯಾರು ಕೂಡ ಹಿಡಿಯಲು ಸಾದ್ಯವಿಲ್ಲ .  ಅಷ್ಟು ವೇಗವಾಗಿ ಹಾರುತ್ತೆ . ಇನ್ನು ಈ ಬಾರಿಯ ರೇಸ್ ಸ್ಪರ್ಧೆಯಲ್ಲಿ ಕರ್ನಾಟಕದ ಘನತೆಯನ್ನ ಮತ್ತಷ್ಟು ಹೆಚ್ಚಿಸುವ ಎಲ್ಲ ಲಕ್ಷಣ ಕಾಣ್ತಿದೆ. ಹೀಗೆ ಪರಿವಾಳ ಈ ಬಾರಿಯ ಸ್ಪರ್ಧೆಯಲ್ಲಿ ಗೆದ್ದು ವಿಶ್ವದಾಖಲೆ ನಿರ್ಮಿಸಲಿ ಎಂಬುದೇ ನಮ್ಮ ಅಶಯವು ಆಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹಾಲು, ಬಸ್ ಆಯ್ತು ಈಗ ಆಸ್ತಿ ನೋಂದಣಿಯೂ ದುಬಾರಿ: ಇಲ್ಲಿದೆ ವಿವರ

ಧರ್ಮಸ್ಥಳ ಕೇಸ್: ಚಿನ್ನಯ್ಯನ್ನನ್ನು ಬೆಳ್ತಂಗಡಿಯಿಂದ ಎಸ್ಐಟಿ ಶಿಫ್ಟ್ ಮಾಡಿದ್ದೆಲ್ಲಿಗೆ

ಅನ್ಯ ಜಾತಿಯವನನ್ನು ಮದುವೆಯಾಗಿದ್ದಕ್ಕೆ ಮಗಳನ್ನೇ ಸುಟ್ಟು ಹಾಕಿದ ತಂದೆ

ಡಾ ಸಿಎನ್ ಮಂಜುನಾಥ್ ಪ್ರಕಾರ ನಿಮ್ಮ ಮೆದುಳಿಗೆ ಬೆಸ್ಟ್ ಆಹಾರ ಯಾವುದು

Karnataka Weather: ಈ ವರ್ಷ ಚಳಿಗಾಲ ಹೇಗಿರಲಿದೆ ಇಲ್ಲಿದೆ ಶಾಕಿಂಗ್ ವರದಿ

ಮುಂದಿನ ಸುದ್ದಿ
Show comments