Select Your Language

Notifications

webdunia
webdunia
webdunia
webdunia

ಮಾಂಗಲ್ಯ ಸರದ ಹವಳ ಗಂಡನ ಜೀವಕ್ಕೇ ಕುತ್ತಂತೆ..! ರಾಜ್ಯಾದ್ಯಂತ ಹರಡಿದೆ ವದಂತಿ

ಮಾಂಗಲ್ಯ ಸರದ ಹವಳ ಗಂಡನ ಜೀವಕ್ಕೇ ಕುತ್ತಂತೆ..! ರಾಜ್ಯಾದ್ಯಂತ ಹರಡಿದೆ ವದಂತಿ
ಬೆಂಗಳೂರು , ಬುಧವಾರ, 5 ಜುಲೈ 2017 (10:43 IST)
ರಾಜ್ಯದ ಹಲವು ಜಿಲ್ಲೆಗಳಲ್ಲಿ ನಿನ್ನೆಯಿಂದ ವಿಚಿತ್ರ ವದಂತಿಯೊಂದು ಹಬ್ಬಿದೆ. ಮಾಂಗಲ್ಯ ಸರದಲ್ಲಿನ ಕೆಂಪು ಹವಳ ಪತಿಯ ಜೀವಕ್ಕೇ ಕುತ್ತು ತರುತ್ತಂತೆ. ಮಾಂಗಲ್ಯ ಸರದಹವಳ ಮಾತನಾಡುತ್ತಂತೆ. ಯಾವ ಮಹಿಳೆಯ ಸರದಲ್ಲಿರುವ ಹವಳ ಮಾತನಾಡುತ್ತೋ ಆ ಮಹಿಳೆಯ ಪತಿಯ ಜೀವಕ್ಕೆ ತೊಂದರೆಯಾಗುತ್ತೆ ಎಂಬ ವದಂತಿ ಹಬ್ಬಿದೆ.

ಇದನ್ನೇ ನಂಬಿದ ಮುಗ್ದ ಮಹಿಳೆಯರು ರಾತ್ರಿಯೆಲ್ಲ ನಿದ್ದೆಗೆಟ್ಟು ಮಾಂಗಲ್ಯ ಪೂಜೆ ಮಾಡಿ ಮಾಂಗಲ್ಯ ಸರದಲ್ಲಿನ ಹವಳಗಳನ್ನ ಒಡೆದು ಹಾಕಿದ್ದಾರೆ. ದಾವಣಗೆರೆ, ಬಳ್ಖಾರಿ ಕೊಪ್ಪಳ, ದಾವಣಗೆರೆ ಮತ್ತು ಚಿತ್ರದುರ್ಗದ ಹಲವು ಹಳ್ಳಿಗಳಲ್ಲಿ ಈ ವದಂತಿ ಹಬ್ಬಿದ್ದು, ಮಹಿಳೆಯರು ಬೆಚ್ಚಿ ಬಿದ್ದಿದ್ದಾರೆ.

ಅಷ್ಟೇ ಅಲ್ಲ, ಅಲ್ಲಿ ಹಾಗಾಯಿತಂತೆ, ಇಲ್ಲಿ ಹೀಗಾಯಿತಂತೆ ಎಂಬ ವದಂತಿಗಳಿಗೆ ರೆಕ್ಕೆ ಪುಕ್ಕ ಬಂದಿದೆ. ಭಯಪಟ್ಟ ಮಹಿಳೆಯರು ಸಂಬಂಧಿಕರಿಗೂ ಕರೆ ಮಾಡಿ ಸುದ್ದಿ ಹಬ್ಬಿಸಿದ್ದಾರೆ. ಈ ವದಂತಿ ಸಮೂಹ ಸನ್ನಿಯಾಗಿದ್ದು, ಇದರಿಂದ ಯಾವುದೇ ತೊಂದರೆಯಿಲ್ಲ ಭಯಬೇಡ ಎನ್ನುತ್ತಿದ್ದಾರೆ ಪ್ರಜ್ಞಾವಂತರು.


Share this Story:

Follow Webdunia kannada

ಮುಂದಿನ ಸುದ್ದಿ

ನವವಿವಾಹಿತರಿಗೆ ಕಾಂಡೋಮ್ ಗಿಫ್ಟ್