ಪದವೀಧರ ಭಾಷಾ ಶಿಕ್ಷಕರ ನೇಮಕಾತಿ ಸಂಭವಿಸಿದಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯು ರಾಜ್ಯ ಗ್ಯಾಸೆಟಿಯರ್‌ನಲ್ಲಿ ಪ್ರಕಟಿಸಿರುವ ನೇಮಕಾತಿ ನಿಯಮಾವಳಿಯಲ್ಲಿ ಬದಲಾವಣೆ ಮಾಡಿ ಇಂಗ್ಲೀಷ್ ಭಾಷೆಯ ಇಚ್ಚಿಕ ವಿಷಯವಾಗಿ ಅಭ್ಯಾಸ ಮಾಡಿದವರಿಗೆ ಶಿಕ್ಷಕರ ಹುದ್ದೆಗೆ ಅವಕಾಶ ಎಂದು ಅಭ್ಯರ್ಥಿಗಳು ಒತ್ತಾಯಿಸಿದ್ದಾರೆ.
ಪದವಿಯಲ್ಲಿ ಸಮಾಜಶಾಸ್ತ್ರ ಮತ್ತು ಆಂಗ್ಲ ಭಾಷೆಯನ್ನು ಐಚ್ಚಿಕ ವಿಷಯವಾಗಿ ಅಭ್ಯಾಸ ಮಾಡಿದ ಅಭ್ಯರ್ಥಿಗಳು
ಪದವೀಧರ ಪ್ರಾಥಮಿಕ ಸಮಾಜ ವಿಜ್ಞಾನ ಶಿಕ್ಷಕರ ಹುದ್ದೆಗೆ ಸ್ಪರ್ಧಿಸಲು ಅರ್ಹರಾಗಿದ್ದಾರೆ. ಆದರೆ ಪದವೀಧರ ಪ್ರಾಥಮಿಕ ಆಂಗ್ಲ ಭಾಷೆ ಶಿಕ್ಷಕರ ಹುದ್ದೆಗೆ ಸ್ಪರ್ಧಿಸಲು ಅರ್ಹರಲ್ಲ ಎಂಬುದನ್ನು ಸುತ್ತೋಲೆಯಿಂದ ತೆಗೆಯಬೇಕು. ಅವರಿಗೂ ಶಿಕ್ಷಕ ಹುದ್ದೆಗೆ ಸ್ಪರ್ಧಿಸಲು ಅವಕಾಶ ನೀಡಿ ತಿದ್ದುಪಡಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
“ಭಾಷಾ ವಿಷಯಗಳನ್ನು ಹೊರತುಪಡಿಸಿ ಐಚ್ಚಿಕ ವಿಷಯವಾಗಿ 3 ವರ್ಷಗಳ ಪದವಿಯಲ್ಲಿ ಕನ್ನಡ/ಆಂಗ್ಲ/ಹಿಂದಿ/ಮರಾಠಿ/ಇತಿಹಾಸ/ಅರ್ಥಶಾಸ್ತ್ರ/ರಾಜ್ಯಶಾಸ್ತ್ರ/ಭೌಗೋಳಿಕ ವಿಷಯಗಳನ್ನು ಅಭ್ಯಾಸ ಮಾಡಿರಬೇಕು” ಎಂದು GPSTRನ ಹೊಸ C&R ನಿಯಮಾವಳಿಯಲ್ಲಿ ಪ್ರಕಟವಾಗಿದ್ದು ಲಕ್ಷಾಂತರ ಉದ್ಯೋಗಾಕಾಂಕ್ಷಿಗಳಿಗೆ ಅಘಾತವಾಗಿದೆ” ಎಂದು ಉದ್ಯೋಗಾಕಾಂಕ್ಷಿ ಮೋಹನರಾಜ ಜಿ. ಹೇಳಿದ್ದಾರೆ.
“ತಮ್ಮ 3 ವರ್ಷದ ಪದವಿಯಲ್ಲಿ ಐಚ್ಚಿಕ ವಿಷಯವಾಗಿ ಆಂಗ್ಲಭಾಷೆಯ ಜೊತೆಗೆ ಸಮಾಜಶಾಸ್ತ್ರ/ ಮನೋವಿಜ್ಞಾನ/ ಶಿಕ್ಷಣ/ಪತ್ರಿಕೆ ಅಭ್ಯಾಸದ ವಿದ್ಯಾರ್ಥಿಗಳು ಮತ್ತು ಟಿಇಟಿ ಪರೀಕ್ಷೆಯಲ್ಲಿ ಅರ್ಹತೆಯನ್ನು ಪಡೆದಿದ್ದಾರೆ. ಇಂತಹ ಅಭ್ಯರ್ಥಿಗಳಿಗೆ ಪದವಿ ಭಾಷಾ ಶಿಕ್ಷಕರ ನೇಮಕಾತಿ ಪರೀಕ್ಷೆ ಬರೆಯಲು ಇಲಾಖಾ ನೇಮಾಕಾತಿ ನಿಯಮಗಳಲ್ಲಿ ಅವಕಾಶ ಸಿಗದೆ ವಂಚಿತರಾಗುತ್ತಿದ್ದಾರೆ. ಹಲವು ಬಾರಿ ಶಿಕ್ಷಣ ಸಚಿವರನ್ನು ಭೇಟಿಯಾಗಿ ಗಮನಕ್ಕೆ ತಂದಿದ್ದು ಶಿಕ್ಷಣ ಸಚಿವರು ಬದಲಾವಣೆ ಮಾಡುವ ಭರವಸೆ ನೀಡಿ ಯಾವುದೇ ಬದಲಾವಣೆಯಾಗಿಲ್ಲ. ಇದರಿಂದ ಆಕಾಂಕ್ಷಿಗಳ ಪದವಿ ಮತ್ತು ತರಬೇತಿ ಪ್ರಯೋಜನಕ್ಕೆ ಬಾರ ನೆರಳು” ಎಂದು ಅಳಲು ತೋಡಿದ್ದಾರೆ.
ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಪದವೀಧರ ಭಾಷಾ ಶಿಕ್ಷಕರ ನೇಮಕಾತಿ ನಿಯಮಾವಳಿಗೆ ಮರುಪರಿಶೀಲನೆಯನ್ನು ತಿದ್ದುಪಡಿ ಮಾಡಿ ಹಲವಾರು ಉದ್ಯೋಗಕಾಂಕ್ಷಿಗಳಿಗೆ ಪ್ರಯೋಜನವಾಗುವಂತೆ ಮಾಡಬೇಕು. 3 ವರ್ಷದ ಪದವಿಯಲ್ಲಿ ಐಚ್ಚಿಕ ವಿಷಯದ ಆಂಗ್ಲ ಭಾಷೆಯ ಜೊತೆಗೆ ಸಮಾಜಶಾಸ್ತ್ರ/ಮನೋವಿಜ್ಞಾನ/ಶಿಕ್ಷಣ/ಪತ್ರಿಕೋದ್ಯಮ ಅಭ್ಯಾಸ ಮಾಡಿದವರಿಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.