Select Your Language

Notifications

webdunia
webdunia
webdunia
webdunia

ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯ ಹತ್ಯೆ

real estate businessman
ಬೆಂಗಳೂರು , ಸೋಮವಾರ, 31 ಅಕ್ಟೋಬರ್ 2016 (12:55 IST)
ನಗರದಲ್ಲಿ ದುಷ್ಕರ್ಮಿಗಳ ಅಟ್ಟಹಾಸ ಮುಂದುವರೆದಿದ್ದು, ಕೇರಳ ಮೂಲದ ಉದ್ಯಮಿ ಪರಚೂರಿ ಸುರೇಂದ್ರ ಎನ್ನುವವನ್ನು ಬೈಕ್‌ನಲ್ಲಿ ಬಂದಿದ್ದ ಇಬ್ಬರು ಅಪರಿಚಿತರು ಹತ್ಯೆ ಮಾಡಿ ಪರಾರಿಯಾಗಿದ್ದಾರೆ.
 
ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಸುರೇಂದ್ರ ತಮ್ಮ ಕಚೇರಿ ಕೆಲಸ ಮುಗಿಸಿಕೊಂಡು ಮನೆಗೆ ಮರಳುತ್ತಿರುವಾಗ ಮನೆಯ ಹತ್ತಿರದಲ್ಲಿಯೇ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಆರೋಪಿಗಳು ಗುಂಡುಹಾರಿಸಿ ಹತ್ಯೆಗೈದಿದ್ದಾರೆ.
 
ಗಂಭೀರವಾಗಿ ಗಾಯಗೊಂಡ ಸುರೇಂದ್ರರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
 
ಸೆಕ್ಯೂರಿಟಿ ಏಜೆನ್ಸಿ ಮತ್ತು ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದ ಸುರೇಂದ್ರರ ವಿರುದ್ಧ ವಂಚನೆ ಸೇರಿದಂತೆ ಹಲವಾರು ಪ್ರಕರಣಗಳು ದಾಖಲಾಗಿದ್ದವು ಎನ್ನಲಾಗುತ್ತಿದೆ. ಕೇರಳದ ಉದ್ಯಮಿಯೊಬ್ಬರಿಗೆ 15 ಲಕ್ಷ ರೂಪಾಯಿ ವಂಚಿಸಿದ್ದರು ಎಂದು ಮೂಲಗಳು ತಿಳಿಸಿವೆ.
 
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಭೋಪಾಲ್ ಜೈಲಿನಿಂದ ಪರಾರಿಯಾಗಿದ್ದ 8 ಸಿಮಿ ಉಗ್ರರು ಎನ್‌ಕೌಂಟರ್‌ನಲ್ಲಿ ಫಿನಿಶ್