Select Your Language

Notifications

webdunia
webdunia
webdunia
webdunia

ಪ್ರೇಮ ವಿವಾಹವಾದವರನ್ನು ಊರಿನಿಂದ ಹೊರಹಾಕಲು ಸಿದ್ಧರಾದರು!

ಪ್ರೇಮ ವಿವಾಹವಾದವರನ್ನು ಊರಿನಿಂದ ಹೊರಹಾಕಲು ಸಿದ್ಧರಾದರು!
ಚಿಕ್ಕೋಡಿ , ಬುಧವಾರ, 29 ಆಗಸ್ಟ್ 2018 (14:03 IST)
ಪ್ರೇಮ ವಿವಾಹವಾಗಿದ್ದಕ್ಕೆ ಗ್ರಾಮದಿಂದ ಹೊರ ಹಾಕಲು ಕುಟುಂಬಸ್ಥರೇ ಮುಂದಾಗಿದ್ದಾರೆ. ಗ್ರಾಮಸ್ಥರ ಒತ್ತಾಯಕ್ಕೆ ಮಣಿದು ಊರು ತೊರೆಯಲು ಒಪ್ಪದ ದಂಪತಿಗಳಿಗೆ ಜಿ ಪಂ ಸದಸ್ಯ ಹಾಗೂ ಸಂಗಡಿಗರಿಂದ ಹಲ್ಲೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.

ಪ್ರೇಮ ವಿವಾಹ ಆದವರು ರಕ್ಷಣೆ ಕೋರಿ ಪೊಲೀಸ್ ಠಾಣೆಗೆ ಹೋದ್ರೆ ಪಿ ಎಸ್ ಐ ಹಾಗೂ ಸಿಬ್ಬಂದಿಗಳಿಂದಲೂ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ನೊಂದ ಮಹಿಳೆ 15 ಕ್ಕು ಹೆಚ್ಚು ಮಾತ್ರೆ ಸೇವಿಸಿ ಆತ್ಮಹತ್ಯೆ ಯತ್ನ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ  ಕಕಮರಿ ಗ್ರಾಮದ ರಮೇಶ ಕನ್ನೊಳ್ಳಿ ಮತ್ತು ಕವಿತಾ ಕನ್ನೊಳ್ಳಿ ದಂಪತಿ ಮೇಲೆ ರಾಜಕೀಯ ಪುಡಾರಿಗಳು ಮತ್ತು ಪೊಲೀಸ್ ರು ಹಲ್ಲೆ ಮಾಡಿದ್ದಾರೆ ಎಂಬ ಆರೋಪವನ್ನ ದಂಪತಿ ಮಾಡಿದ್ದಾರೆ.

 
ಐಗಳಿ ಪಿಎಸ್ ಐ ಬಿರಾದಾರ ಹಾಗೂ ಸಿಬ್ಬಂದಿ ಕುಂಬಾರ, ಎಎಸ್ಐ, ಜಿ.ಪಂ ಸದಸ್ಯ ಗುರು ದಾಸ್ಯಾಳ ಸೇರಿ ಹಲವರಿಂದ ಹಲ್ಲೆ  ನಡೆದಿದೆ ಎಂದು ಆರೋಪಿಸಿದ್ದಾರೆ. ಪಿಎಸ್ಐ ಬಿರಾದರ ಹಾಗೂ ಜಿ ಪಂ ಸದಸ್ಯ ಗುರುದಾಸ್ಯಾಳ ಮೇಲೆ ದೂರು ನೀಡಿದ್ರು ಸ್ವೀಕರಿಸದ ಐಗಳಿ ಪೊಲೀಸ್ ರಿಂದ ನೊಂದ ದಂಪತಿಗಳು ನ್ಯಾಯಕ್ಕಾಗಿ ಅಥಣಿ ಸಿಪಿಐ ಹೆಚ್. ಶೇಖರಪ್ಪ ಗೆ ದೂರು ನೀಡಲು ಮುಂದಾಗಿದ್ದರು. ಅಲ್ಲಿಯೂ ನ್ಯಾಯ ಸಿಗದಿದ್ದಾಗ ಕವಿತಾ ಕನ್ನೋಳ್ಳಿ ಪೊಲೀಸ್ ಠಾಣೆ ಯಲ್ಲೇ 15ಕ್ಕೂ ಹೆಚ್ಚು ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಮಾಡಿದ್ದು ಅಥಣಿ ಪೊಲೀಸರು ಮಹಿಳೆಗೆ ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.

ಅಂತರ್ಜಾತಿ ವಿವಾಹದ ಹಿನ್ನೆಲೆಯಲ್ಲಿ ತಮಗೆ ಕಿರುಕುಳ ನೀಡಲಾಗುತ್ತಿದೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಪೊಲೀಸರು ಹಲ್ಲೆ ನಡೆಸಿದ್ದಾರೆ. ಪೋಷಕರ ಒಪ್ಪಿಗೆ ಇದ್ದರೂ ಕೂಡ ಗ್ರಾಮದ ಮುಖಂಡರು ತಮ್ಮ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ನಮಗೆ ನ್ಯಾಯ ಕೊಡಿಸಿ ಎಂದು ದಂಪತಿ ತಮ್ಮ ನೊವು ತೋಡಿಕೊಂಡಿದ್ದಾರೆ.

 

 

Share this Story:

Follow Webdunia kannada

ಮುಂದಿನ ಸುದ್ದಿ

ಪುನರ್ಜನ್ಮ ನಿಜಕ್ಕೂ ಇದೆಯಾ...!