ಬಿಜೆಪಿಯಿಂದ 50 ಕೋಟಿಯಲ್ಲ 100 ಕೋಟಿ ಆಫರ್: ಕಾಂಗ್ರೆಸ್ ಶಾಸಕ ರವಿ ಗಣಿಗ ಆರೋಪ

Krishnaveni K
ಸೋಮವಾರ, 18 ನವೆಂಬರ್ 2024 (10:38 IST)
Photo Credit: X
ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಬಿಜೆಪಿ ಆಪರೇಷನ್ ಕಮಲಕ್ಕೆ ಪ್ರಯತ್ನಿಸಿತ್ತು. ಇದಕ್ಕಾಗಿ ಶಾಸಕರಿಗೆ 50 ಕೋಟಿ ರೂ. ಆಫರ್ ನೀಡಿತ್ತು ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಕಾಂಗ್ರೆಸ್ ಶಾಸಕ ರವಿ ಗಣಿಗ ಈಗ ಅದು 50 ಅಲ್ಲ 100 ಕೋಟಿ ಎಂದಿದ್ದಾರೆ.

ರಾಜ್ಯ ಸರ್ಕಾರವನ್ನು ಉರುಳಿಸಲು ಬಿಜೆಪಿ ಆಪರೇಷನ್ ಕಮಲ ಮಾಡಲು ಯತ್ನಿಸಿತ್ತು. ನಮ್ಮ ಶಾಸಕರಿಗೆ 50 ಕೋಟಿ ರೂ. ಆಫರ್ ನೀಡಿತ್ತು. ಇದನ್ನು ಕೆಲವು ಶಾಸಕರೇ ನನ್ನ ಬಳಿ ಹೇಳಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಇದನ್ನು ಡಿಕೆ ಶಿವಕುಮಾರ್ ಕೂಡಾ ಸಮರ್ಥಿಸಿಕೊಂಡಿದ್ದರು.

ಇದೀಗ ಇದಕ್ಕೆ ಟ್ವಿಸ್ಟ್ ನೀಡಿರುವ ಶಾಸಕ ರವಿ ಗಣಿಗ ಆಫರ್ 50 ಕೋಟಿಯದ್ದಲ್ಲ, 100 ಕೋಟಿ ಎಂದಿದ್ದಾರೆ. ಇದಕ್ಕೆ ಸಾಕ್ಷಿಯೆಂಬಂತೆ ನಮ್ಮಲ್ಲಿ ಹಲವು ವಿಡಿಯೋ, ಫೋನ್ ಕರೆಗಳ ಧ್ವನಿ ಮುದ್ರಣವಿದೆ. ಸಮಯ ಬಂದಾಗ ಎಲ್ಲವನ್ನೂ ಬಹಿರಂಗಪಡಿಸುವುದಾಗಿ ಹೇಳಿದ್ದಾರೆ.

ಎರಡು ತಿಂಗಳ ಹಿಂದೆಯೂ ಶಾಸಕ ರವಿ ಗಣಿಗ ಇದೇ ಆರೋಪ ಮಾಡಿದ್ದರು. ಇದೀಗ ಮತ್ತೊಮ್ಮೆ ಅದೇ ಆರೋಪ ಮಾಡಿದ್ದಾರೆ. ಹಿಂದಿನ ಸರ್ಕಾರದಲ್ಲಿ ಮಾಡಿದ್ದ ಅಕ್ರಮ ಹಗರಣದ ದುಡ್ಡಿನಿಂದಲೇ ಬಿಜೆಪಿ ಈ ಕೆಲಸ ಮಾಡುತ್ತಿದೆ. ಇದಕ್ಕೀಗ ಜೆಡಿಎಸ್ ಕೂಡಾ ಸಾಥ್ ನೀಡುತ್ತಿದೆ ಎಂದು ರವಿ ಗಣಿಗ ಗಂಭೀರ ಆರೋಪ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಂಕಷ್ಟದಲ್ಲಿರುವ ಶ್ರೀಲಂಕಾಗೆ ಆಪರೇಷನ್ ಸಾಗರ್ ಬಂಧು ಆರಂಭಿಸಿದ ಭಾರತ

ರಾಜ್ಯದ ಎಲ್ಲ ಸಮಸ್ಯೆಗೆ ನಾಟಿಕೋಳಿಯಲ್ಲಿ ಪರಿಹಾರವಿದೆಯೇ: ಎನ್.ರವಿಕುಮಾರ್ ಪ್ರಶ್ನೆ

ಶ್ರೀಲಂಕಾಗೆ ಸಹಾಯ ಮಾಡಲು ಹೋಗಿ ಮುಜುಗರಕ್ಕೀಡಾದ ಪಾಕಿಸ್ತಾನ, ಆಗಿದ್ದೇನು ಗೊತ್ತಾ

ಎರಡು ರಾತ್ರಿ ತೋಟದಲ್ಲೇ ಕಳೆದ ಮಗು, ಕೊನೆಗೂ ಹುಡುಕಿಕೊಟ್ಟ ಸಾಕು ನಾಯಿ

ಭಾರತಕ್ಕೆ ರಷ್ಯಾ ಅಧ್ಯಕ್ಷ ಪುಟಿನ್ ಭೇಟಿ, ದೆಹಲಿಗೆ ಆಗಮಿಸಿದ ರಷ್ಯಾದ ವಿಶೇಷ ಭದ್ರತಾ ಪಡೆ

ಮುಂದಿನ ಸುದ್ದಿ
Show comments