Select Your Language

Notifications

webdunia
webdunia
webdunia
webdunia

ಸರ್ಕಾರದ ವಿರುದ್ಧ ಸಮರ ಸಾರುತ್ತಿರುವ ಪಡಿತರ ವಿತರಕರು

ಸರ್ಕಾರದ ವಿರುದ್ಧ ಸಮರ ಸಾರುತ್ತಿರುವ ಪಡಿತರ ವಿತರಕರು
bangalore , ಗುರುವಾರ, 19 ಅಕ್ಟೋಬರ್ 2023 (13:48 IST)
ಇಂದು ರಾಜ್ಯದ ಎಲ್ಲಾ ನ್ಯಾಯಬೆಲೆ‌ ಅಂಗಡಿಗಳು ಬಂದ್ ಆಗಲಿದೆ.ಅನ್ನ ಭಾಗ್ಯದ ಅಕ್ಕಿ ಬದಲು ಹಣ ನೀಡುವುದರ ವಿರುದ್ಧ ಪಡಿತರ ವಿತರಕರು ಸಿಡಿದೆದ್ದಿದ್ದಾರೆ.ಡಿಬಿಟಿ ಇನ್ನೂ ಮುಂದುವರೆಸಿರುವ ಸರ್ಕಾರದ ಕ್ರಮಕ್ಕೆ ಪಡಿತರ ವಿತರಕರು ಆಕ್ರೋಶ ಹೊರಹಾಕಿದ್ದಾರೆ.
 
 ಇಂದು ರೇಷನ್ ವಿತರಣೆ ಬಂದ್ ಮಾಡಲು ಸರ್ಕಾರಿ ಪಡಿತರ ವಿತರಕರ ನಿರ್ಧಾರಿಸಿದ್ದು ,ರಾಜ್ಯದ 20350 ರೇಷನ್ ಅಂಗಡಿಗಳು ಬಂದ್ ಮಾಡಲು ಮುಂದಾಗಿದ್ದು,ಈ ತಿಂಗಳ ಒಳಗಾಗಿ ಹೆಚ್ಚುವರಿ ಅಕ್ಕಿ ವಿತರಣೆಗೆ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.ಪಡಿತರ ವಿತರಣೆಯನ್ನು ನಂಬಿಕೊಡ ಮಂದಿಗೆ ಸರ್ಕಾರದ ನಡೆಯಿಂದ ಆರ್ಥಿಕ ಸಂಕಷ್ಟ ಉಂಟಾಗಿದೆ.ತಮ್ಮ ಸಮಸ್ಯೆಯ ಕುರಿತು ಸಚಿವರ ಹಾಗೂ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.ಒಂದೆರೆಡು ತಿಂಗಳು ಅಂತ ಹೇಳಿ DBT ಮುಂದುವರೆಸಿಕೊಂಡು ಬರಲಾಗುತ್ತಿದೆ.ಈ ಕುರಿತಾಗಿ ಸರ್ಕಾರ ಕ್ರಮ ವಹಿಸದೆ ಇದ್ದಲ್ಲಿ ಹೋರಾಟ ತೀವ್ರಗೊಳಿಸುತ್ತೇವೆ ಎಂದು ಸರ್ಕಾರಿ ಪಡಿತರ ವಿತರಕರ ಹಿತರಕ್ಷಣಾ ಸಂಘದ ಅಧ್ಯಕ್ಷ ಜೆ.ಬಿ ಕುಮಾರ್ ಮಾಹಿತಿ ನೀಡಿದ್ದಾರೆ.
 
ರಾಜ್ಯದಲ್ಲಿ 1.14 ಕೋಟಿ ಪಡಿತರ ಚೀಟಿಗಳಿದ್ದು, 4.30 ಕೋಟಿ ಫಲಾನುಭವಿಗಳಿದ್ದಾರೆ.ತಲಾ 5 ಕೆಜಿಯಂತೆ ಅಕ್ಕಿ ವಿತರಣೆ ಮಾಡಲು 2.28 ಲಕ್ಷ ಮೆಟ್ರಿಕ್ ಟನ್ ಬೇಕು.ಅಕ್ಕಿ ಕೊಡಲು ಸಾಧ್ಯವಿಲ್ಲದ ಕಾರಣ ಪ್ರತಿ ವ್ಯಕ್ತಿಗೆ 170 ರೂಪಾಯಿ ನೀಡಲು ಸರ್ಕಾರ ನಿರ್ಧಾರಿಸಿದ್ದು,ಒಂದು ಕೆಜಿ ಅಕ್ಕಿಗೆ ಸರ್ಕಾರ 1.24 ರೂಪಾಯಿ ಕಮಿಷನ್ ನೀಡುತ್ತೆ.ಸರಾಸರಿ ಒಬ್ಬ ಪಡಿತರ ವಿತರಕರಿಗೆ ಸರಾಸರಿ 13 ಸಾವಿರ ರೂಪಾಯಿ ಕೈತಪ್ಪಿ ಹೋಗ್ತಿದೆ 

Share this Story:

Follow Webdunia kannada

ಮುಂದಿನ ಸುದ್ದಿ

ಎಲ್ಲೆಂದರಲ್ಲಿ ಕಸ ಹಾಕುವವರೇ ಎಚ್ಚರ