Select Your Language

Notifications

webdunia
webdunia
webdunia
webdunia

ನೀಚ ಕೃತ್ಯ …ತಂದೆಯಿಂದಲೇ ಮಗಳ ಮೇಲೆ ನಿರಂತರ ಅತ್ಯಾಚಾರ!

ನೀಚ ಕೃತ್ಯ …ತಂದೆಯಿಂದಲೇ ಮಗಳ ಮೇಲೆ ನಿರಂತರ ಅತ್ಯಾಚಾರ!
ಶಿವಮೊಗ್ಗ , ಗುರುವಾರ, 3 ಫೆಬ್ರವರಿ 2022 (09:31 IST)
ಶಿವಮೊಗ್ಗ : ಪಾಪಿ ತಂದೆಯೋರ್ವ ಮಗಳ ಮೇಲೆಯೇ ನಿರಂತರ ಅತ್ಯಾಚಾರ ನಡೆಸಿದ್ದು, ಕೊನೆಗೆ ತಾಯಿಯ ಉಪಾಯದಿಂದ ಪೊಲೀಸರ ಅತಿಥಿಯಾಗಿರುವ ಘಟನೆ ಶಿವಮೊಗ್ಗದ ಗೋವಿಂದಪುರದಲ್ಲಿ ನಡೆದಿದೆ.

ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ನಿವಾಸಿಯಾಗಿರುವ ಆರೋಪಿ, ತನ್ನ ಗ್ರಾಮದಲ್ಲಿಯೇ ಶುಂಠಿ ವ್ಯಾಪಾರ ಮಾಡಿಕೊಂಡಿದ್ದ. ಈತನಿಗೆ ಮಗಳು ಸೇರಿದಂತೆ ಇಬ್ಬರು ಗಂಡು ಮಕ್ಕಳಿದ್ದಾರೆ. ಆದರೆ ದುರುಳ ತಂದೆ, ಮಗಳ ಮೇಲೆ ಕಳೆದ ಹಲವು ವರ್ಷಗಳಿಂದ ನಿರಂತರ ಅತ್ಯಾಚಾರ ಎಸಗಿದ್ದಾನೆ. ತನ್ನ ತಂದೆಯ ದುಷ್ಕೃತ್ಯವನ್ನು ಮಗಳು ತಾಯಿಗೂ ಹೇಳದೆ ಸಹಿಸಿಕೊಂಡಿದ್ದಳು. 

ತಂದೆಯ ಕಾಟ ವಿಪರೀತವಾದಾಗ ಅನಿವಾರ್ಯವಾಗಿ ಆತನ ನೀಚ ಕೆಲಸವನ್ನು ತನ್ನ ತಾಯಿಗೆ ತಿಳಿಸಿದ್ದಾಳೆ. ವಿಷಯ ತಿಳಿದ ತಾಯಿ ತನ್ನ ಮಗಳಿಗೆ ಗಂಡು ಹುಡುಕಿ ವಿವಾಹ ಮಾಡುವ ಯೋಚನೆ ಮಾಡುತ್ತಾರೆ. ಓರ್ವ ಹುಡುಗನನ್ನೂ ಹುಡುಕಿ ಕಳೆದ 15 ದಿನಗಳ ಹಿಂದೆ ನಿಶ್ಚಿತಾರ್ಥ ಮಾಡುತ್ತಾರೆ. ಆದರೆ ತನ್ನ ಮಗಳಿಗೆ ಯಾವಾಗ ವಿವಾಹ ನಿಶ್ಚಿತಾರ್ಥವಾಯಿತೋ ಆಗ ತಂದೆ, ಮಗಳಿಗೆ ಮದುವೆ ಆಗದಂತೆ ಬೆದರಿಕೆ ಹಾಕುತ್ತಾನೆ.

ಈ ವೇಳೆ ಯುವತಿಯ ದೊಡ್ಡಮ್ಮ, ನಿಮ್ಮ ಪತ್ನಿ ಮತ್ತು ಮಕ್ಕಳು ಕಾಣುತ್ತಿಲ್ಲವೆಂದು ಆರೋಪಿಯನ್ನು ಗೋವಿಂದಪುರಕ್ಕೆ ಕರೆಯಿಸಿಕೊಂಡಿದ್ದಾರೆ. ಬಳಿಕ ಶಿವಮೊಗ್ಗದ ಮಹಿಳಾ ಪೊಲೀಸರಿಗೆ ವಿಷಯ ತಿಳಿಸಿ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣ ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ವರನ ಮನೆಯವರು ಮದುವೆ ರದ್ದು ಮಾಡಿದ ಬೇಸರದಲ್ಲಿ ವಧು ಆತ್ಮಹತ್ಯೆ