Select Your Language

Notifications

webdunia
webdunia
webdunia
webdunia

ಅಪ್ರಾಪ್ತ ಬಾಲಕನಿಂದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ

Rape
ಮಣಿಪುರ್ , ಸೋಮವಾರ, 20 ನವೆಂಬರ್ 2023 (17:00 IST)
ಮಣಿಪುರ್:  ಬಾಲಕಿ ತನ್ನ ಕುಟುಂಬಸ್ಥರ ಜತೆ ಮಾಳಿಗೆಯ ಮೇಲೆ ಮಲಗಿದ್ದಳು. ರಾತ್ರಿ ಸುಮಾರು 12 ಗಂಟೆ ಸುಮಾರಿಗೆ ನೆರೆಯ ಸ್ಲಂ ನಿವಾಸಿ ಬಾದಲ್ ಹುಡುಗಿಯನ್ನು  ಎತ್ತಿಕೊಂಡು ಹೋಗಿ ಖಾಲಿ ಪ್ಲಾಟ್ ಒಂದರಲ್ಲಿ ಕುಕೃತ್ಯವನ್ನು ಎಸಗಿದ್ದಾನೆ.  ಬಾಲಾಪರಾಧಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.
 
ಜಿಲ್ಲೆಯ ಲೋನಿ ಕ್ಷೇತ್ರದಲ್ಲಿ ಕಳವಳಕಾರಿ ಘಟನೆಯೊಂದು ನಡೆದಿದ್ದು, ಮಾಳಿಗೆಯ ಮೇಲೆ ಮಲಗಿದ್ದ ನೆರಮನೆಯ ನಿವಾಸಿ 10ರ ಪ್ರಾಯದ ಬಾಲಕಿಯನ್ನು ಅಪಹರಿಸಿದ 16 ವರ್ಷದ ಬಾಲಕನೊಬ್ಬ ಆಕೆಯ ಮೇಲೆ ಅಮಾನುಷವಾಗಿ ಅತ್ಯಾಚಾರ ಎಸಗಿದ್ದಾನೆ.
 
ಮಗುವಿನ ಅಳುವಿನ ಸದ್ದು ಕೇಳಿದ ಆಕೆಯ ಪಾಲಕರು ಸ್ಥಳಕ್ಕೆ ತಲುಪಿದಾಗ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ.
 
ಹುಡುಗಿಯ ತಂದೆತಾಯಿಗಳು  ನೀಡಿದ ದೂರಿನ ಆಧಾರದ ಮೇಲೆ ಬಾದಲ್ ಎಂಬ ಬಾಲಾಪರಾಧಿಯನ್ನು ಬಂಧಿಸಲಾಗಿದ್ದು, ಪೀಡಿತಳನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ಆಕೆ ಹತ್ತಿರದ ಸರಕಾರಿ ಶಾಲೆಯಲ್ಲಿ 5ನೇ ತರಗತಿಯ ವಿದ್ಯಾರ್ಥಿಯಾಗಿದ್ದಾಳೆ.

Share this Story:

Follow Webdunia kannada

ಮುಂದಿನ ಸುದ್ದಿ

ಟ್ರಾನ್ಸ್ ಫಾರಂ ಸಮಸ್ಯೆಯನ್ನ ವೈಟ್ ಟ್ಯಾಪಿಂಗ್ ಮೇಲೆ ಹಾಕಿದ ಬೆಸ್ಕಾಂ