Select Your Language

Notifications

webdunia
webdunia
webdunia
webdunia

ಬಿಜೆಪಿ ಮುಖಂಡನ ವಿರುದ್ಧ ರೇಪ್ ಆರೋಪ ದಾಖಲು

ಬಿಜೆಪಿ ಮುಖಂಡನ ವಿರುದ್ಧ ರೇಪ್ ಆರೋಪ ದಾಖಲು
ಬೆಂಗಳೂರು , ಭಾನುವಾರ, 9 ಅಕ್ಟೋಬರ್ 2016 (11:25 IST)
ಬಿಜೆಪಿ ಮುಖಂಡ ವೆಂಕಟೇಶ್ ಮೌರ್ಯ ತಮ್ಮ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು 38 ವರ್ಷದ ಮಹಿಳೆಯೊಬ್ಬರು ಪ್ರಕರಣ ದಾಖಲಿಸಿದ್ದಾರೆ.
 
ಬೆಂಗಳೂರು: ಬಿಜೆಪಿ ನಾಯಕ ವೆಂಕಟೇಶ್ ಮೌರ್ಯ ಕಮ್ಮ ಮೇಲೆ ರೇಪ್ ಎಸಗಿದ್ದಾರೆ ಎಂದು ಮಹಿಳೆಯೊಬ್ಬಳು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
 
ಕೇಂದ್ರ ಸರಕಾರದಿಂದ ಅನುದಾನ ಕೊಡಿಸುವುದಾಗಿ ನಂಬಿಸಿ ತಮ್ಮ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿ ನಂತರ ವಂಚಿಸಿದ್ದಾರೆ ಎಂದು 38 ವರ್ಷದ ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ.
 
ಕಳೆದ ಆರು ವರ್ಷಗಳ ಹಿಂದೆ ನನ್ನ ಮೇಲೆ ಅತ್ಯಾಚಾರ ನಡೆದಿದೆ.ಕೂಡಲೇ ಆರೋಪಿ ವೆಂಕಟೇಶ್‌ನನ್ನು ಬಂಧಿಸಬೇಕು ಎಂದು ಮಹಿಳೆ ಪೊಲೀಸರಿಗೆ ಮನವಿ ಮಾಡಿದ್ದಾಳೆ.
 
ಅತ್ಯಾಚಾರ ಘಟನೆ ನಡೆದು ಆರು ವರ್ಷಗಳ ನಂತರ ದೂರು ದಾಖಲಿಸಿದ್ದರಿಂದ ಪೊಲೀಸರು, ಸಾಕ್ಷ್ಯಗಳು ದೊರೆತರೆ ಮಾತ್ರ ಆರೋಪಿಯನ್ನು ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ರಿಲಯನ್ಸ್‌ನಿಂದ ಹೊಸ 4ಜಿ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ