Webdunia - Bharat's app for daily news and videos

Install App

ರೇಪ್ ಕೇಸ್: ಆರೋಪಿಗಳಿಂದ ಯುವತಿಗೆ ಧಮ್ಕಿ

Webdunia
ಶನಿವಾರ, 26 ಮೇ 2018 (16:37 IST)
ಹತ್ತು ವರ್ಷದ ಬಾಲಕಿ ಮೇಲೆ‌ ಅತ್ಯಾಚಾರ ಎಸಗಿ ಜೈಲು ಪಾಲಾಗಿದ್ದ  ಅರೋಪಿ ಸಂತ್ರಸ್ತ  ತಾಯಿ ಹಾಗೂ ಸಾಕ್ಷ್ಯ ಧಾರರಿಗೆ ಧಮ್ಕಿ ಹಾಕಿರುವ ಘಟನೆ ಆನೇಕಲ್ ನ ಚೂಡೇನಹಳ್ಳಿ ಯಲ್ಲಿ ನಡೆದಿದೆ. 
ಆನೇಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಚೂಡನಹಳ್ಳಿಯಲ್ಲಿ‌ ಆಗಸ್ಟ್ 24, 2017 ರಂದು  ಮನೆಯ ಮುಂದೆ ಅಟವಾಡ್ತಿದ್ದ 10 ವರ್ಷದ ಬಾಲಕಿ ಯನ್ನ 70 ವರ್ಷದ ನಾಗಪ್ಪ ಎಂಬ ಕಾಮುಕ  ಪುಸಲಾಯಿಸಿ ಬಾಲಕಿ ಯನ್ನ ಅತ್ಯಾಚಾರ ಎಸಗಿ ಪರಾರಿಯಾಗಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆನೇಕಲ್  ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿತ್ತು.
 
ಈ ಅರೋಪದ ಮೇಲೆ ಕಾಮುಕ ನಾಗಪ್ಪ ನನ್ನ ಬಂಧಿಸಿ ಜೈಲು ಪಾಲು ಮಾಡಿದ್ದರು ..ಅದರೆ ಇತ್ತೀಚೆಗೆ ಬೇಲ್  ಮೇಲೆ ಹೊರಗಡೆ ಬಂದಿದ್ದ ನಾಗಪ್ಪ ಮತ್ತು ಅವರ ಕುಟುಂಬದವರು ಸಾಕ್ಷ್ಯ ಹೇಳಿದ್ದ ಮುನಿರತ್ನಮ್ಮ ಹಾಗೂ ಗೌರಮ್ಮ‌ ಎಂಬುವವರಿಗೆ ಪ್ರತಿ ದಿನ  ಅವಾಚ್ಯ ಶಬ್ದಗಳಿಂದ ಬೈಯ್ದು ಧಮ್ಕಿ ಹಾಕಿದ್ದಾರೆ .ಇದರಿಂದ ಪ್ರಕರಣ ಮತ್ತೆ ಪೊಲೀಸ್ ಠಾಣೆ ಮೇಟ್ಟಿಲೇರಿದೆ‌. 
 
ಅತ್ಯಾಚಾರವೆಸಗಿದ ಅರೋಪಿ ಕಾಮುಕ ನಾಗಪ್ಪ ನಿಗೆ ಕಾನೂನು ಕ್ರಮ ಕೈಗೊಳ್ಳುವಂತೆ ಸಂತ್ರಸ್ತೆ ತಾಯಿ ಮತ್ತು ಸಾಕ್ಷ್ಯದಾರರು ಮೂರು ದಿನಗಳ ಹಿಂದೆಯೇ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದರು ಇನ್ನು ಅಪರಾಧಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲ್ಲದೆ ಸಂತ್ರಸ್ತರಿಗೆ ಯಲ್ಲಿಯೂ ನ್ಯಾಯ ಸಿಗದಂತೆ ಆಗಿದೆ ಇನ್ನು ಅತ್ಯಾಚಾರಕ್ಕೆ ಒಳಗಾಗಿದ್ದ ಬಾಲಕಿ ಸ್ಕೂಲಿಗೆ ಹೋಗಲು ಸಹ ಹೆದರಿ ಕುರಿಯನ್ನು ಕಾಯುವುದಕ್ಕೆ ಹೋಗುತ್ತಿದ್ದಾಳೆ. ಇಂತಹ ಸ್ಥಿತಿಗೆ ತಂದ ಕ್ರೂರಿಗಳಿಗೆ ಗಲ್ಲು ಶಿಕ್ಷೆಯಾಗಲೇ ಬೇಕು ಎನ್ನುವುದು ಸಂತ್ರಸ್ತ ಕುಟುಂಬದ ಒತ್ತಾಯ ಇನ್ನಾದರೂ ಪೋಲಿಸ್ ಇಲಾಖೆಯವರು ಇವರಿಗೆ ನ್ಯಾಯ ದೊರಕಿಸಿ ಕೊಟ್ಟು ಆ ಬಾಲಕಿ ಗ್ರಾಮದಲ್ಲಿ ಧೈರ್ಯದಿಂದ ಒಡಾಡುವಂತೆ ಮಾಡಬೇಕೆಂದು ಇಲ್ಲಿನ ಗ್ರಾಮಸ್ಥರ ಒತ್ತಾಯಿಸಿದ್ದಾರೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದಶಕದ ಬಳಿಕ ನಡೆದ ಜಾತ್ರೆಯಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ ಜಾರಕಿಹೊಳಿ ಪುತ್ರ

ಇಸ್ರೇಲ್‌ನಲ್ಲಿ ಆರೈಕೆ ಮಾಡುತ್ತಿದ್ದ ಮಹಿಳೆಯನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಕೇರಳದ ಯುವಕ

ಏರ್‌ ಇಂಡಿಯಾ: ಇನ್ನೇನು ಟೇಕ್‌ ಆಫ್‌ ಆಗ್ಬೇಕು ಅನ್ನುಷ್ಟರಲ್ಲೇ ಕುಸಿದು ಬಿದ್ದ ಪೈಲಟ್‌, ತಪ್ಪಿದ ಭಾರೀ ದೊಡ್ಡ ದುರಂತ

ರಜೆ ಕೇಳಿದ್ದಕ್ಕೆ ಮಾಲೀಕ ಗದರಿದ್ದಕ್ಕೆ ಆತನ ಪತ್ನಿ, ಮಗನನ್ನೇ ಕೊಂದ ಕೆಲಸದಾತ

ಅಮರನಾಥ ಯಾತ್ರೆ 2025: ಐದು ಬಸ್‌ಗಳು ಪರಸ್ಪರ ಡಿಕ್ಕಿ, 36ಯಾತ್ರಾರ್ಥಿಗಳಿಗೆ ಗಾಯ

ಮುಂದಿನ ಸುದ್ದಿ
Show comments