ಬೆಂಗಳೂರು: ಚಿನ್ನ ಕಳ್ಳಸಾಗಣೆ ಕೇಸ್ ನಲ್ಲಿ ಬಂಧಿತರಾಗಿರುವ ನಟಿ ರನ್ಯಾ ರಾವ್ ಗೆ ಸ್ವಾಮೀಜಿಯೊಬ್ಬರೂ ಸಾಥ್ ನೀಡಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ.
ನಟಿ ರನ್ಯಾ ರಾವ್ ದುಬೈನಿಂದ ಕೋಟ್ಯಾಂತರ ಬೆಲೆ ಬಾಳುವ ಚಿನ್ನ ಅಕ್ರಮವಾಗಿ ಸಾಗಿಸಿದ ಕಾರಣಕ್ಕೆ ಬೆಂಗಳೂರು ವಿಮಾನ ನಿಲ್ದಾದಲ್ಲಿ ಬಂಧಿತರಾಗಿದ್ದರು. ಅದರ ಬೆನ್ನಲ್ಲೇ ಈಗ ಹಲವು ಪ್ರಭಾವಿಗಳ ಲಿಂಕ್ ಕೂಡಾ ಬಯಲಾಗುತ್ತಿದೆ.
ರನ್ಯಾ ರಾವ್ ಜೊತೆಗೆ ಇಬ್ಬರು ಸಚಿವರು ಶಾಮೀಲಾಗಿದ್ದಾರೆ ಎನ್ನಲಾಗಿತ್ತು. ಆ ವಿಚಾರ ರಾಜಕೀಯ ವಲಯದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ. ಅದರ ಬೆನ್ನಲ್ಲೇ ರನ್ಯಾಗೆ ಬೆಂಗಳೂರು ಮೂಲದ ಸ್ವಾಮೀಜಿ ಜೊತೆಗಿನ ಲಿಂಕ್ ಬಯಲಾಗುತ್ತಿದೆ.
ರನ್ಯಾ ವ್ಯವಹಾರದಲ್ಲಿ ಸ್ವಾಮೀಜಿಯೊಬ್ಬರೂ ಶಾಮೀಲಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ಡಿಆರ್ ಐ ಅಧಿಕಾರಿಗಳು ಸ್ವಾಮೀಜಿ ಮನೆ ಮೇಲೂ ದಾಳಿ ಮಾಡಿದ್ದು ಚಿನ್ನ ಪತ್ತೆಯಾಗಿದೆ ಎನ್ನಲಾಗಿದೆ. ಸ್ವಾಮೀಜಿ ದುಬೈನಲ್ಲೇ ಕಚೇರಿ ತೆರೆದು ವ್ಯವಹಾರ ಮಾಡುತ್ತಿದ್ದರು ಎನ್ನಲಾಗಿದೆ. ಕ್ರಿಪ್ಟೊ ಕರೆನ್ಸಿ ಮೂಲಕ ವ್ಯವಹಾರ ನಡೆಯುತ್ತಿತ್ತು ಎನ್ನಲಾಗಿದೆ. ಇದೀಗ ಈ ನಿಟ್ಟಿನಲ್ಲಿ ಡಿಆರ್ ಐ ಅಧಿಕಾರಿಗಳು ಇನ್ನಷ್ಟು ತನಿಖೆ ನಡೆಸುತ್ತಿದ್ದಾರೆ.