Publish Date: Thu, 01 Feb 2018 (10:35 IST)
Updated Date: Thu, 01 Feb 2018 (10:37 IST)
ಬೆಂಗಳೂರು: ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಮುಖ್ಯಸ್ಥೆಯಾಗಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವ ನಟಿ, ಮಾಜಿ ಸಂಸದೆ ರಮ್ಯಾ ರಾಜ್ಯ ಕಾಂಗ್ರೆಸ್ ನಾಯಕರ ಮೇಲೆ ಮುನಿಸಿಕೊಂಡಿದ್ದಾರೆ.
ಕೆಪಿಸಿಸಿ ಪ್ರಚಾರ ಸಮಿತಿ ಸಭೆಗೆ ಆಗಮಿಸಿದ್ದ ರಮ್ಯಾಗೆ ವೇದಿಕೆಯಲ್ಲಿ ಕೂರಲು ಅವಕಾಶ ಕಲ್ಪಿಸದೇ ಸಿನಿಮಾ ನಟರ ಸಾಲಿನಲ್ಲಿ ಅವಕಾಶ ನೀಡಿದ್ದಕ್ಕೆ ರಮ್ಯಾಗೆ ಸಿಟ್ಟು ಬಂದಿದೆ.
ಸೀದಾ ಹಿಂದಿನ ಸಾಲಿನಲ್ಲಿ ಕೂತ ರಮ್ಯಾ ಕಹಳೆ ಊದಲು ವೇದಿಕೆಗೆ ಬರುವಂತೆ ಸಚಿವ ಡಿಕೆ ಶಿವಕುಮಾರ್ ಕರೆದರೂ ಮೊದಲು ಬಾರದೇ ನಂತರ ಬಂದರೂ ಕಹಳೆ ಊದದೇ ವೇದಿಕೆಯಿಂದ ಹೊರ ನಡೆದರು. ಅಷ್ಟೇ ಅಲ್ಲದೆ, ನಂತರ ಕಾರ್ಯಕ್ರಮ ಮುಗಿಯುವ ಮೊದಲೇ ಫ್ಲೈಟ್ ಗೆ ತಡವಾಗುತ್ತದೆಂದು ನೆಪ ಹೇಳಿ ತೆರಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ