ಬೆಂಗಳೂರು: ಬೆಂಗಳೂರಿನ ರಾಮೇಶ‍್ವರಂ ಕೆಫೆ ಸ್ಪೋಟಕ್ಕೆ ಉಗ್ರರು ಖರ್ಚು ಮಾಡಿದ್ದು ಕೇವಲ 4,500 ರೂ ಎಂದು ಖಾಸಗಿ ವಾಹಿನಿಯೊಂದು ವರದಿ ಮಾಡಿದೆ.
ಬಾಂಬ್ ತಯಾರಿಸಲು ಶಂಕಿತರು ಎರಡು ತಿಂಗಳು ಸಮಯ ತೆಗೆದುಕೊಂಡಿದ್ದರು. ಬಾಂಬ್ ತಯಾರಿಕೆಗೆ ಬೇಕಾದ ಕಚ್ಚಾವಸ್ತುಗಳನ್ನು ಆನ್ ಲೈನ್ ಮೂಲಕ ತರಿಸಿಕೊಂಡಿದ್ದರು. ಮತ್ತೆ ಕೆಲವು ವಸ್ತುಗಳನ್ನು ನೇರವಾಗಿ ಅಂಗಡಿಯಿಂದ ಖರೀದಿ ಮಾಡಿದ್ದರು. ಆದರೆ ಇದಕ್ಕೆಲ್ಲಾ ತಗುಲಿದ್ದು ಕೇವಲ 4500 ರೂ. ಎಂದು ತಿಳಿದುಬಂದಿದೆ.
ಬಾಂಬ್ ತಯಾರಿಕೆಗಾಗಿ ಬ್ಯಾಟರಿ, ನಟ್, ಬೋಲ್ಟ್, ರಂಜಕ ಮತ್ತು ವಯರ್ ಗಳನ್ನು ಖರೀದಿ ಮಾಡಿದ್ದಾರೆ. ಇವುಗಳಲ್ಲಿ ಕೆಲವನ್ನು ಆನ್ ಲೈನ್ ಮೂಲಕ ಮತ್ತೆ ಕೆಲವನ್ನು ಅಂಗಡಿಯಿಂದಲೇ ಖರೀದಿಸಿದ್ದಾರೆ. ಬೆಂಗಳೂರು ಸಮೀಪವೇ ಬಾಂಬ್ ತಯಾರಿಕೆ ಮಾಡಲಾಗಿತ್ತು.
ಮತೀನ್ ಮತ್ತು ಮುಸಾಫಿರ್ ಜೊತೆ ಮುಜಾಮಿಲ್ ಬಾಂಬ್ ತಯಾರಿಕೆಗೆ ಬೇಕಾದ ವಸ್ತುಗಳನ್ನು ಒದಗಿಸಿದ್ದ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಬುಧವಾರ ಎನ್ಐಎ ಅಧಿಕಾರಿಗಳು ತಮಿಳುನಾಡು, ಕರ್ನಾಟಕ, ಉತ್ತರ ಪ್ರದೇಶ ಸೇರಿದಂತೆ ಅನೇಕ ಕಡೆ ದಾಳಿ ನಡೆಸಿದ್ದರು.