Select Your Language

Notifications

webdunia
webdunia
webdunia
webdunia

ಮಾಧ್ಯಮಗಳಿಗೆ ಅಂಕುಶ: ಸದನ ಸಮಿತಿ ಅಧ್ಯಕ್ಷರಾಗಲು ರಮೇಶ್ ಕುಮಾರ್ ನಿರಾಕರಣೆ

ಮಾಧ್ಯಮಗಳಿಗೆ ಅಂಕುಶ: ಸದನ ಸಮಿತಿ ಅಧ್ಯಕ್ಷರಾಗಲು ರಮೇಶ್ ಕುಮಾರ್ ನಿರಾಕರಣೆ
ಬೆಂಗಳೂರು , ಶುಕ್ರವಾರ, 31 ಮಾರ್ಚ್ 2017 (18:46 IST)
ಮಾಧ್ಯಮಗಳಿಗೆ ಅಂಕುಶ ಹಾಕಲು ಸ್ಪೀಕರ್ ಕೆ.ಬಿ. ಕೋಳಿವಾಡ ರಚಿಸಿರುವ ಸದನ ಸಮಿತಿ ಅಧ್ಯಕ್ಷರಾಗಲು ಆರೋಗ್ಯ ಸಚಿವ ರಮೇಶ್ ಕುಮಾರ್ ನಿರಾಕರಿಸಿದ್ದಾರೆ. ಈ ಕುರಿತು, ಸ್ಪೀಕರ್`ಗೆ ಪತ್ರ ಬರೆದು ಸ್ಪಷ್ಟನೆ ನೀಡಿದ್ದಾರೆ.

ಸೌಹಾರ್ದಯುತವಾಗಿ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಮುದ್ರಣ ಮತ್ತು ಟಿವಿ ಮಾಧ್ಯಮದ ಪತ್ರಕರ್ತರನ್ನ ಚಹಾಕೂಟಕ್ಕೆ ಕರೆದು ಸ್ಪೀಕರ್ ಸಮ್ಮುಖದಲ್ಲೇ ಚರ್ಚೆ ನಡೆಸಿ ಪರಿಹರಿಸಿಕೊಳ್ಳಬೇಕು. ಸದನ ಸಮಿತಿ ರಚನೆಯಿಂದಾಗಿ ಮಾಧ್ಯಮಗಳ ಸ್ವಾತಂತ್ರ್ಯ ಹರಣದ ತಪ್ಪು ಸಂದೇಶ ಸಮಾಜಕ್ಕೆ ರವಾನೆಯಾಗುತ್ತಿದೆ ಎಂದು ರಮೇಶ್ ಕುಮಾರ್ ತಿಳಿಸಿದ್ದಾರೆ.

ಇತ್ತೀಚೆಗೆ ಮಾಧ್ಯಮಗಳಲ್ಲಿ ತಮ್ಮ ವೈಯಕ್ತಿಕ ವಿಚಾರಗಳ ಕುರಿತಾದ ವರದಿ ಪ್ರಸಾರವಾದ ಬಗ್ಗೆ ಶಾಸಕರಾದ ಸುರೇಶ್ ಗೌಡ, ರಾಜುಕಾಗೆ ಸೇರಿದಂತೆ ಹಲವು ಶಾಸಕರು ಆಕ್ಷೇಪ ಎತ್ತಿದ್ದರು. ಇದಾದ ಬಳಿಕ ಸ್ಪೀಕರ್ ಕೋಳಿವಾಡ ಸದನ ಸಮಿತಿ ರಚಿಸಿ, ಆರೋಪ ಮಾಡಿದವರನ್ನೇ ಸಮಿತಿಯ ಸದಸ್ಯರಾಗಿ ನೇಮಿಸಿದ್ದರು..

Share this Story:

Follow Webdunia kannada

ಮುಂದಿನ ಸುದ್ದಿ

ಪರೋಕ್ಷವಾಗಿ ಯಡಿಯೂರಪ್ಪ, ಈಶ್ವರಪ್ಪಗೆ ಪ್ರಧಾನಿ ಮೋದಿ ವಾರ್ನಿಂಗ್