Publish Date: Sat, 03 Aug 2019 (17:00 IST)
Updated Date: Sat, 03 Aug 2019 (17:02 IST)
ಮಾಜಿ ಸಿಎಂ ಸಿದ್ದರಾಮಯ್ಯ ಪರವಾಗಿ ಮಾಜಿ ಸ್ಪೀಕರ್ ರಮೇಶ್ ಕುಮಾರ ಬ್ಯಾಟಿಂಗ್ ಮಾಡಿದ್ದಾರೆ.
ಕೋಲಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪರ ರಮೇಶ್ ಕುಮಾರ್ ಬ್ಯಾಟಿಂಗ್ ಮಾಡಿದ್ದು, ವಿಪಕ್ಷ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯ ಒಬ್ಬರೇ ಸೂಕ್ತ ವ್ಯಕ್ತಿ ಎಂದಿದ್ದಾರೆ.
ಸಿದ್ದರಾಮಯ್ಯ ಗಿಂತ ಯೋಗ್ಯ ನಾಯಕ ಪಕ್ಷದಲ್ಲಿ ನಮಗೆ ಸಿಗೋದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಒಬ್ಬರೇ ಅತ್ಯಂತ ಯೋಗ್ಯ ವ್ಯಕ್ತಿ ಎಂದಿದ್ದಾರೆ.
ಕೋಲಾರದ ಸುಗಟೂರು ಗ್ರಾಮದಲ್ಲಿ ಶಾಸಕ ರಮೇಶ್ ಕುಮಾರ್ ಹೇಳಿಕೆ ನೀಡಿದ್ದು, ವಿರೋಧ ಪಕ್ಷದ ನಾಯಕನಾಗಿ ಆಯ್ಕೆ ಮಾಡುವ ವಿಚಾರ ಕುರಿತು ಪ್ರತಿಕ್ರಿಯಿಸಿದ್ದು, ಇಂತಹ ಯಾವುದೇ ಚರ್ಚೆಯಾಗಿಲ್ಲ ಎಲ್ಲಾ ಊಹಾಪೋಹ ಎಂದರು.
ನಾನು ಮತ್ತೆ ಕಾಂಗ್ರೆಸ್ ಸದಸ್ಯತ್ವ ಪಡೆದಿರುವೆ, ಪಕ್ಷ ಒಪ್ಪಿಸಿದ ಕೆಲಸ ಮಾಡುವೆ. ಹೀಗಂತ ಹೇಳೋ ಮೂಲಕ ಸಿದ್ದರಾಮಯ್ಯ ಪರ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮಾತನಾಡಿದ್ದಾರೆ.