Webdunia - Bharat's app for daily news and videos

Install App

ಬಿಜೆಪಿ ಮೂರೂ ಬಿಟ್ಟವರು ಊರಿಗೆ ದೊಡ್ಡವರು ಎಂಬಂತೆ ಆಡುತ್ತಾರೆ: ರಮೇಶ್ ಬಾಬು

Krishnaveni K
ಮಂಗಳವಾರ, 7 ಜನವರಿ 2025 (15:15 IST)
ಬೆಂಗಳೂರು: ಮೂರನ್ನು ಬಿಟ್ಟವರು ಊರಿಗೆ ದೊಡ್ಡವರು ಎಂಬ ಗಾದೆ ಮಾತಿನಂತೆ ಕರ್ನಾಟಕದ ಭಾರತೀಯ ಜನತಾ ಪಕ್ಷದ ನಾಯಕರು ತಮ್ಮ ವರ್ತನೆಯನ್ನು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮಾಜಿ ಶಾಸಕ ರಮೇಶ್ ಬಾಬು ವಾಗ್ದಾಳಿ ನಡೆಸಿದ್ದಾರೆ.

ತಮ್ಮ ರಾಜಕೀಯ ಹೋರಾಟಗಳಿಗೆ ಬಿಜೆಪಿ ನಾಯಕರು ಕ್ರಿಮಿನಲ್ ಆರೋಪದ ಮುಖಂಡರನ್ನು ಜೊತೆಯಲ್ಲಿ ತೆಗೆದು ಕೊಂಡು ಹೋಗುತ್ತಿರುವುದು ನಾಚಿಕೆಗೇಡಿನ ಪರಮಾವಧಿ. ಇಡೀ ರಾಷ್ಟ್ರ ನೋಡುವಂತೆ ಪಿಎಸ್ಐ ಹಗರಣದಲ್ಲಿ ಗಂಭೀರ ಆರೋಪವನ್ನು ಹೊತ್ತಿದ್ದ ಭಾರತೀಯ ಜನತಾ ಪಕ್ಷ ತದನಂತರ ಸದರಿ ಪ್ರಕರಣವನ್ನು ಸಿಐಡಿ ತನಿಖೆಗೆ ನೀಡಿ ಕೈ ತೊಳೆದುಕೊಳ್ಳುವ ಪ್ರಯತ್ನವನ್ನು ಮಾಡಿತ್ತು. ಕರ್ನಾಟಕದ ಸಾವಿರಾರು ಯುವಕರ ಭವಿಷ್ಯವನ್ನು ಕಸಿ ದಂತಹ ಕರ್ನಾಟಕ ಪಿಎಸ್ಐ ಹಗರಣ, ಕಾಂಗ್ರೆಸ್ ಪಕ್ಷದ ಮತ್ತು ಪ್ರಿಯಾಂಕ ಖರ್ಗೆ ರವರ ಪ್ರಯತ್ನದಿಂದ ಆಚೆ ಬಂದಿತ್ತು, ಇಡೀ ರಾಜ್ಯದಲ್ಲಿ ಒಬ್ಬ ಹಿರಿಯ ದರ್ಜೆಯ ಐಪಿಎಸ್ ಅಧಿಕಾರಿ ಮತ್ತು ಐಎಎಸ್ ಅಧಿಕಾರಿ ಅಮಾನತು ಶಿಕ್ಷೆಗೆ ಒಳಗಾದಂತಹ ಪ್ರಕರಣವಿದು ಎಂದು ಬಿಜೆಪಿ ಮೇಲೆ ವಾಗ್ದಾಳಿ ನಡೆಸಿದ್ದಾರೆ.

ಇದೇ ಪ್ರಕರಣದಲ್ಲಿ ಅಂದಿನ ಗೃಹ ಸಚಿವರಾದ ಅರಗ ಜ್ಞಾನೇಂದ್ರ ರವರು ಪ್ರಮುಖ ಆರೋಪಿ  ಬಿಜೆಪಿಯ ಅಂದಿನ ಮುಖಂಡರಾದ ಶ್ರೀಮತಿ ದಿವ್ಯ ಹಾದರಗಿ ಅವರ ಮನೆಗೆ ಮತ್ತು  ಶಾಲೆಗೆ ಭೇಟಿ ನೀಡಿದ ಭಾವಚಿತ್ರಗಳು/ ಫೋಟೋಗಳು ಮಾಧ್ಯಮದಲ್ಲಿ ಪ್ರಕಟಗೊಂಡಿದ್ದವು. ಆಕೆಯ ಬಂಧನದ ನಂತರ ಭಾರತೀಯ ಜನತಾ ಪಕ್ಷ ಆಕೆಯನ್ನು ಪಕ್ಷದಿಂದ ಉಚ್ಛಾಟಿಸಿರುವ ಹೇಳಿಕೆಯನ್ನು ನೀಡಿತ್ತು.  ಆದರೆ ಮತ್ತೆ ಗುಲ್ಬರ್ಗಾದ ಪ್ರತಿಭಟನೆಯಲ್ಲಿ ಆಕೆಗೆ ಆದ್ಯತೆಯನ್ನು ನೀಡಿ ಅವರ ಜೊತೆಯಲ್ಲಿ ಬಿಜೆಪಿ ನಾಯಕರು ಬೀದಿ ಹೋರಾಟ ನಡೆಸಿರುವುದು ವಿಪರ್ಯಾಸ ಎಂದು ಟೀಕಿಸಿದ್ದಾರೆ.

 
ಬಿಜೆಪಿ ನಾಯಕರಿಗೆ ಕಳಂಕಿತರನ್ನು, ಆರೋಪಿತರನ್ನು ಮತ್ತು ಕ್ರಿಮಿನಲ್ ಹಿನ್ನೆಲೆ ಉಳ್ಳವರನ್ನೂ ತಮ್ಮ ಹೋರಾಟಗಳಲ್ಲಿ ಜೊತೆ ಜೊತೆಯಲಿ ಕರೆದುಕೊಂಡು ಹೋಗದೆ ಇದ್ದರೆ ಆತ್ಮತೃಪ್ತಿ ಇರುವುದಿಲ್ಲ. ಕಳಂಕಿತರನ್ನು ಜೊತೆಯಲ್ಲಿ ಇಟ್ಟುಕೊಂಡು ಬಿಜೆಪಿ ನಾಯಕರು ಗುಲ್ಬರ್ಗದಲ್ಲಿ ಪ್ರತಿಭಟನೆಯನ್ನು ಮಾಡುವುದರ ಮೂಲಕ ಮತ್ತೊಮ್ಮೆ ತಮ್ಮ ವ್ಯಕ್ತಿತ್ವವನ್ನು ಮತ್ತು ಸಂಘ ಪರಿವಾರದ ಆದರ್ಶಗಳನ್ನು ಸಾಬೀತುಪಡಿಸಿಕೊಂಡಿದ್ದಾರೆ ಎಂದಿದ್ದಾರೆ.

ಈ ಹಿಂದೆ ರಾಜ್ಯದಲ್ಲಿ ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಬಹುದೊಡ್ಡ ಹಗರಣ ಪಿಎಸ್ಐ ಹಗರಣ, 545 ಪೊಲೀಸ್ ಸಬ್ ಇನ್ಸೆಕ್ಟರ್ ನೇಮಕಾತಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿತ್ತು. ಪಿಎಸ್ಐ ನೇಮಕಾತಿಗಾಗಿ ವರ್ಷಗಟ್ಟಲೆ ಶ್ರಮ ಪಟ್ಟು ಪರೀಕ್ಷೆ ಬರೆದ ನಾಡಿದ ಸಾವಿರಾರು ಯುವಕರಿಗೆ ಇದರಿಂದ ಅನ್ಯಾಯವಾಗುತ್ತಿತ್ತು ಈ ಭ್ರಷ್ಟಾಚಾರದ ಸುಳಿವು ಸಿಗುತ್ತಿದಂತೆ ಶಾಸಕರಾಗಿದ್ದ ಪ್ರಿಯಾಂಕ್ ಖರ್ಗೆಯವರು ಅಂದು ನಾಡಿನ ಯುವಕರ ಪರ ನಿಂತು ಈ ಅಕ್ರಮದ ವಿರುದ್ಧ  ದಾಖಲೆ ಸಮೇತ ಹೋರಾಟ ನಡೆಸಿ  ಅಕ್ರಮವನ್ನು ಬಯಲಿಗೆಳೆದರು. ಆರಂಭದಲ್ಲಿ ಬಿಜೆಪಿ ಸರ್ಕಾರ ಮತ್ತು ನಾಯಕರು ಇದನ್ನು ಅಲ್ಲಗಳೆದರಾದರೂ ಒತ್ತಡಕ್ಕೆ ಮಣಿದು ತನಿಖೆ ನಡೆಸಿದಾಗ ಸ್ವತಃ ಬಿಜೆಪಿ ನಾಯಕರೇ ಈ ಪಿಎಸ್ಐ ಅಕ್ರಮದಲ್ಲಿ ಭಾಗಿಯಾಗಿರುವುದು ಜಗಜ್ಜಾಹೀರಾಯಿತು. ದಿವ್ಯಾ ಹಾಗರಗಿ ಸೇರಿದಂತೆ ಅನೇಕ ಬಿಜೆಪಿ ನಾಯಕರು ಜೈಲು ಪಾಲಾದರು. ಪ್ರಿಯಾಂಕ್ ಖರ್ಗೆಯವರ ನಿರಂತರ ಪರಿಶ್ರಮದಿಂದ ಪಿಎಸ್ಐ ಹುದ್ದೆಗಳಿಗೆ ಮರುಪರೀಕ್ಷೆಯೂ ನಡೆಯಿತು ಎಂದು ಸಮರ್ಥಿಸಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments