Select Your Language

Notifications

webdunia
webdunia
webdunia
webdunia

ರಮಾನಾಥ್ ರೈಗೆ ಗೃಹ ಸಚಿವ ಸ್ಥಾನ ಬೇಡ: ಮಾಜಿ ಶಾಸಕ

ರಮಾನಾಥ್ ರೈಗೆ ಗೃಹ ಸಚಿವ ಸ್ಥಾನ ಬೇಡ: ಮಾಜಿ ಶಾಸಕ
ಮಂಗಳೂರು , ಬುಧವಾರ, 30 ಆಗಸ್ಟ್ 2017 (20:42 IST)
ಅರಣ್ಯ ಖಾತೆ ಸಚಿವ ರಮಾನಾಥ್ ರೈಗೆ ಗೃಹ ಸಚಿವ ಸ್ಥಾನ ನೀಡುವುದು ಬೇಡ ಎಂದು ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ ಸರಕಾರವನ್ನು ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹ ಸಚಿವರಾಗಲು ಶಿಕ್ಷಣ, ಹಿನ್ನೆಲೆ ಬೇಕು. ಆದರೆ, ರಮಾನಾಥ್ ರೈ ರೌಡಿಸಂ ಇತಿಹಾಸವಿರುವುದರಿಂದ ಅವರ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಇಂತಹ ವ್ಯಕ್ತಿ ಗೃಹ ಸಚಿವನಾಗಲು ಸೂಕ್ತವಲ್ಲ ಎಂದರು.
 
ಕಳೆದ ವರ್ಷ ಸಚಿವ ರೈ ತಮ್ಮ ಪ್ರಭಾವ ಬಳಸಿ ತಮ್ಮ ವಿರುದ್ಧದ ಕೇಸ್‌ನ್ನು ವಜಾಗೊಳಿಸಿಕೊಂಡಿದ್ದಾರೆ. ಅವರು ಪ್ರತೀಕಾರದ ಮನೋಭಾವದವರಾಗಿದ್ದರಿಂದ ಮಹತ್ವದ ಗೃಹ ಸಚಿವ ಸ್ಥಾನ ನೀಡುವುದು ಬೇಡ ಎಂದು ಆಗ್ರಹಿಸಿದ್ದಾರೆ.

 
ಹಿಂದೆ ಬಿಜೆಪಿ ನಂತರ ಜೆಡಿಎಸ್ ತದನಂತರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವ ರೈ, ಚುನಾವಣೆ ಸಂದರ್ಭದಲ್ಲಿ ಇಂದಿರಾಗಾಂಧಿಯವರ ವಿರುದ್ಧವೇ ವಾಗ್ದಾಳಿ ನಡೆಸಿದ್ದರು ಎಂದು ಮಾಜಿ ಶಾಸಕ ವಿಜಯ ಕುಮಾರ ಶೆಟ್ಟಿ ಆರೋಪಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಸೋನಿಯಾ ಅಳಿಯ ರಾಬರ್ಟ್ ವಾದ್ರಾ ವಿರುದ್ಧ ಎಫ್‌ಐಆರ್ ದಾಖಲು