Webdunia - Bharat's app for daily news and videos

Install App

ವಿಧಾನಸಭೆಗೆ ಅಂತಿಮ ವಿದಾಯ ಹೇಳಿದ ರಾಜಾಹುಲಿ..!

Webdunia
ಶುಕ್ರವಾರ, 24 ಫೆಬ್ರವರಿ 2023 (19:38 IST)
ಕಳೆದ ೧೦ ದಿನಗಳಿಂದ ನಡೆದಿದ್ದ ಜಂಟಿ,ಬಜೆಟ್ ಅಧಿವೇಶನಕ್ಕೆ ತೆರೆಬಿದ್ದಿದೆ..ಕೊನೆಯ ದಿನದ ಕಲಾಪದಲ್ಲಿ ಮಾಜಿ ಸಿಎಂ ಯಡಿಯೂರಪ್ಪನವರ ವಿದಾಯ ಭಾಷಣ ಪ್ರಮುಖ ಹೈಲೈಟ್ಸ್ ಆಯ್ತು..ಕಾಂಗ್ರೆಸರ,ಜೆಡಿಎಸ್,ಬಿಜೆಪಿ ಶಾಸಕರಿಂದಲೂ ಯಡಿಯೂರಪ್ಪನವರ ಬಗ್ಗೆ ಗುಣಗಾನವಾಯ್ತು..ತಮ್ಮ ವಿದಾಯ ಭಾಷಣದ ಮೂಲಕ ಮಾಜಿ ಸಿಎಂ ಎಲ್ಲರ ಗಮನ ಸೆಳೆದ್ರು..ನನಗೆ ೨೭ ಕ್ಕೆ ೮೦ ತುಂಬ್ತಿದೆ..ಶಿಕಾರಿಪುರ ನನಗೆ ರಾಜಕೀಯ ಜನ್ಮನೀಡಿದೆ..ಆರ್ ಎಸ್ ಎಸ್ ತರಬೇತಿಯಿಂದಾಗಿ ನನಗೆ ಇಷ್ಟೆಲ್ಲಾ ಸ್ಥಾನಮಾನಗಳು ಸಿಕ್ಕಿವೆ..ನನ್ನ ಹುಟ್ಟು ಹಬ್ಬದ ದಿನವೇ ಶಿವಮೊಗ್ಗ ಏರ್ಪೋರ್ಟ್ ಉದ್ಘಾಟನೆಯೂ ಇದೆ..ನಾನು ರಾಜ್ಯ ಸುತ್ತಿ ಪಕ್ಷ ಸಂಘಟಿಸುತ್ತೇನೆ ಅಂತ ಗದ್ಗದಿತರಾದ್ರು..ಇದೇ ವೇಳೆ ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಬಿಎಸ್ ವೈ ಗುಣಗಾನ ಮಾಡಿದ್ರು..ಅವರಿಂದ ಕಲಿಯುವುದು ಸಾಕಷ್ಟಿದೆ,ಈ ಇಳಿ ವಯಸ್ಸಿನಲ್ಲೂ ಅವರ ಅಧ್ಯಯನ ಶೀಲತೆ ಎಲ್ಲರಿಗೂ ಮಾದರಿಯಾಗಬೇಕು ಎಂದು‌ಹೊಗಳಿದ್ರು..ಇದೇ ವೇಳೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಯಶಸ್ವಿಯಾಗಿ ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆಂದು ಹರ್ಷ ವ್ಯಕ್ತಪಡಿಸಿದ್ರು.

ಇನ್ನು ಸಾ.ರಾ.ಮಹೇಶ್,ಈಶ್ವರ್ ಖಂಡ್ರೆ ಸೇರಿದಂತೆ ಹಲವು ಶಾಸಕರು ಬಿಎಸ್ವೈ ವಿದಾಯದ ಬಗ್ಗೆ ಅನುಕಂಪ ವ್ಯಕ್ತಪಡಿಸಿದ್ರು..ಬಿಜೆಪಿ ಕಟ್ಟುವಲ್ಲಿ,ರಾಜ್ಯದಲ್ಲಿ ಅಧಿಕಾರಕ್ಕೆ ತರುವಲ್ಲಿ ಅವರ ಪಾತ್ರವನ್ನ ಮೆಲುಕು ಹಾಕಿ ಹೊಗಳಿದ್ರು..ಆದ್ರೆ ಬಿಜೆಪಿ ಶಾಸಕ ಯತ್ನಾಳ್ ಮಾತ್ರ ಅರ್ಧ ಹೊಗಳಿಕೆ ಇನ್ನರ್ಧ ತೆಗಳುವ ಮೂಲಕ ಕುಟುಕಿದ್ರು..ಯಡಿಯೂರಪ್ಪ ಪಕ್ಷ ಕಟ್ಟಿ ಅಧಿಕಾರಕ್ಕೆ ತರುವಲ್ಲಿ ಕಷ್ಟ ಪಟ್ಟಿದ್ದಾರೆ..ಅವರು ಅನಂತ್ ಕುಮಾರ್ ಇಬ್ಬರೇ ಇಲ್ಲಿ ಪಕ್ಷ ಕಟ್ಟಿದವರು..ಕೃಷ್ಣಾರ್ಜುನ ರೀತಿ ಪಕ್ಷವನ್ನ ಸಂಘಟಿಸಿದ್ರು..ಯಡಿಯೂರಪ್ಪ ಮುಂದೆ ನಿಲ್ಲಲ್ಲ ಅಂದಿದ್ದಾರೆ..ಸಚಿವರೊಬ್ಬರು ನಿಲ್ಲಲ್ಲ ಅಂದವರು ಅವರೇ ನಿಲ್ತೇನೆ ಅಂದಿದ್ದಾರೆ..ಸಾಯುವಾಗಲೂ ಶಾಸಕರಾಗಿಯೇ ಸಾಯಬೇಕು ಅನ್ನೋ ನಿರ್ಧಾರ ಅವರದ್ದು ಅನ್ನುವ ಮೂಲಕ ಶಾಮನೂರರನ್ನ ಕುಟುಕಿದ್ರು..ಸ್ಪೀಕರ್ ಹಾಗೂ ನನ್ನನ್ನ ಯಡಿಯೂರಪ್ಪ ಸಚಿವರನ್ನಾಗಿ ಮಾಡಲಿಲ್ಲ..ಸಚಿವನಾದ್ರೆ ಸಿಎಂ ಅಗ್ಬಿಡ್ತಾನೇ ಅನ್ನೋ ಕಾರಣಕ್ಕೆ ಮಾಡಲೇ ಇಲ್ಲ ಅಂತ ಯಡಿಯೂರಪ್ಪನವರ ಬಗ್ಗೆ ಅಸಮಾಧಾನವನ್ನೂಹೊರ ಹಾಕಿದ್ರು.

ಇನ್ನು ಯಡಿಯೂರಪ್ಪನವರ ವಿಧಾಯಕ್ಕೆ ಹಲವು ಶಾಸಕರು ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ರು..ಈ ವೇಳೆ ಯಡಿಯೂರಪ್ಪನವರನ್ನ ಹೊಗಳುತ್ತಲೇ ಬಿಜೆಪಿ ನಾಯಕರನ್ನ ತೆಗಳುವ ಪ್ರಯತ್ನ ಈಶ್ವರ್ ಖಂಡ್ರೆ ಮಾಡಿದ್ರು..ಹೇಗಾದ್ರೂ ಮಾಡಿ ಸರ್ಕಾರ ತರಬೇಕು ಅಂತ ಯಡಿಯೂರಪ್ಪ ಪ್ರಯಾಸ ಪಟ್ರು..ಸರ್ಕಾರವನ್ನೂ ತಂದ್ರು..ಆದರೆ ಅವರು ಸಿಎಂ ಆದ್ಮೇಲೆ ಅವರನ್ನ ಕಣ್ಣೀರು ಹಾಕಿಸಿ ಸ್ಥಾನದಿಂದ ಕೆಳಗಿಳಿಸಿದ್ರು ಅಂತ ಆರ್ ಎಸ್ ಎಸ್ ನಾಯಕರ ಬಗ್ಗೆ ಪರೋಕ್ಷವಾಗಿ ಲೇವಡಿ ಮಾಡಿದ್ರು..ಒಬ್ಬ ಲಿಂಗಾಯತ ಸಮುದಾಯದ ಪ್ರಬಲ ನಾಯಕನನ್ನ ಈ ರೀತಿ ನಡೆಸಿಕೊಂಡಿದ್ದು ಸರಿಯಲ್ಲ ಅಂತ ಈಶ್ವರ್ ಖಂಡ್ರೆ ಚುಚ್ಚಿದ್ರು..ಇದು ರಾಜಕಾರಣಕ್ಕೆ ತಿರುಗಲಿದೆ ಎಂದರಿತ ಮಾಧುಸ್ವಾಮಿ ಅವರನ್ನ ಯಾರೂ ಇಳಿಸಿಲ್ಲ..ವಯಸ್ಸಾಯ್ತು ಅಂತ ಅವರಾಗಿಯೇ ಕೆಳಗಿಳಿದ್ರು ಅಂತ ಸಮರ್ಥನೆಗೆ ಮುಂದಾದ್ರು..ಈ ವೇಳೆ ಖಂಡ್ರೆ ಹಾಗೂ ಮಾಧುಸ್ವಾಮಿ ನಡುವೆ ಜಟಾಪಟಿ ಶುರುವಾಯ್ತು.

ಇಂದು ವಿಧಾನಸಭೆ ಅಧಿವೇಶನ ಮುಕ್ತಾಯವಾಗಿದೆ..ಇವತ್ತಿನ ಕಲಾಪದಲ್ಲಿ ಮಾಜಿ ಸಿಎಂ ಯಡಿಯೂರಪ್ಪನವರ ಭಾಷಣ ಎಲ್ಲರ ಗಮನ ಸೆಳೆಯಿತು..ಇದು ತಮ್ಮ ಕೊನೆಯ ಅಧಿವೇಶನವೆಂದು ವಿದಾಯ ಹೇಳಿದ್ರು..ಇದೇ ವೇಳೆ ಮಾಜಿ ಪ್ರಧಾನಿ ದೇವೇಗೌಡರ ಅಧ್ಯಯನ ಶೀಲತೆ ಹಾಗೂ ಸಿದ್ದರಾಮಯ್ಯನವರ ಕರ್ತವ್ಯ ನಿಷ್ಠೆಯ ಬಗ್ಗೆಯೂ ಹೊಗಳಿ ಸದನದ ಗಮನವನ್ನ ಸೆಳೆದ್ರು..ಹಲವು ಶಾಸಕರು ಬಿಎಸ್ ವೈ ಬಗ್ಗೆ ತಮ್ಮ ಅಭಿಪ್ರಾಯ ಮಂಡಿಸಿದ್ರು..ಇದೇ ವೇಳೆ ಸ್ಪೀಕರ್ ಕೂಡ ವಿದಾಯ ಹೇಳುವ ಮೂಲಕ ಗದ್ಗದಿತರಾದ್ರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments