Select Your Language

Notifications

webdunia
webdunia
webdunia
webdunia

ಮಂತ್ರಾಲಯದಲ್ಲಿ ಕೊರೊನಾ ನಡುವೆ ನಡೆದ ರಾಯರ ಆರಾಧನಾ ಮಹೋತ್ಸವ

ಮಂತ್ರಾಲಯದಲ್ಲಿ ಕೊರೊನಾ ನಡುವೆ ನಡೆದ ರಾಯರ ಆರಾಧನಾ ಮಹೋತ್ಸವ
ರಾಯಚೂರು , ಭಾನುವಾರ, 2 ಆಗಸ್ಟ್ 2020 (23:01 IST)
ಮಂತ್ರಾಲಯ ಮಠದಲ್ಲಿ ರಾಯರ 349ನೇ ಆರಾಧನಾ ಮಹೋತ್ಸವ ನಡೆಯಿತು.

ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಶ್ರೀಮಠದ ಆವರಣದಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ ಸಪ್ತರಾತ್ರೋತ್ಸವಕ್ಕೆ ಚಾಲನೆ ನೀಡಿದರು.

ನಂತರ ಮಠದ ಮುಖ್ಯದ್ವಾರದಲ್ಲಿ ಗೋಪೂಜೆ, ಅಶ್ವಪೂಜೆ ಗಜಪೂಜೆ, ಧಾನ್ಯ ಪೂಜೆ ನೆರವೇರಿಸಿ ನಂತರ ಮಹಾ ಆರತಿ ಮಾಡಿದರು. ಶ್ರೀಮಾತಾಮಂಚಾಲಮ್ಮ ದೇವಿಗೆ ಹಾಗೂ ಶ್ರೀ ರಾಯರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಬೆಳಿಗ್ಗೆ ರಾಯರ ಬೃಂದಾವನದಲ್ಲಿ ನೈರ್ಮಲ್ಯ ವಿಸರ್ಜನೆ ನಂತರ , ಅಲಂಕೃತ ಬೃಂದಾವನಕ್ಕೆ ಶ್ರೀ ಸುಬುಧೇಂದ್ರ ತೀರ್ಥರು ವಿಶೇಷ ಪೂಜೆ, ಮಹಾಮಂಗಳಾರತಿ ನೆರವೇರಿಸಿದರು.

ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ಮಠಗಳಲ್ಲಿ ಒಂದಾದ ಮಂತ್ರಾಲಯ ಶ್ರೀ ರಾಯರ ಆರಾಧನೆ ಪ್ರತಿ ವರ್ಷ ಅತ್ಯಂತ ವಿಜೃಂಭಣೆಯಿಂದ ಜರಗುತ್ತಿತ್ತು. ಆದರೆ ಈ ಬಾರಿ ಕೋವಿಡ್ ಕಾರಣದಿಂದ ಸರಕಾರದ ನಿಯಮ ಮತ್ತು ಮಾರ್ಗಸೂಚಿಯಂತೆ ಸರಳವಾಗಿ ಆಚರಿಸಲಾಗುತ್ತಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಪೂಜೆ: ಹೈ ಅಲರ್ಟ್