ಬೆಂಗಳೂರಿಗರಿಗೆ ಸಿಹಿ ಸುದ್ದಿ: ಮುಂದಿನ ವಾರ ಮಳೆ

Krishnaveni K
ಗುರುವಾರ, 2 ಮೇ 2024 (09:35 IST)
ಬೆಂಗಳೂರು: ಸತತ ಬಿಸಿಲು, ನೀರಿಲ್ಲದೇ ಪರದಾಡುತ್ತಿರುವ ಬೆಂಗಳೂರಿಗರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಮುಂದಿನ ವಾರ ಮಳೆಯಾಗುವ ಸಾಧ‍್ಯತೆಯಿದೆ ಎಂದು ಹವಾಮಾನ ವರದಿ ತಿಳಿಸಿದೆ.

ಬೆಂಗಳೂರಿನಲ್ಲಿ ಈ ವಾರ ತಾಪಮಾನ ಗರಿಷ್ಠ ಸ್ಥಿತಿಗೆ ತಲುಪಿತ್ತು. ಹಿಂದೆಂದೂ ಕಾಣದಷ್ಟು ತಾಪಮಾನ ದಾಖಲಾಗಿತ್ತು. ಸತತ ಬಿಸಿಲಿನಿಂದ ಬೇಸತ್ತ ಬೆಂಗಳೂರಿನಲ್ಲಿ ಮುಂದಿನ ವಾರದಿಂದ ಕೆಲವು ದಿನ ಮಳೆಯಾಗುವ ಸಾಧ‍್ಯತೆಯಿದೆ. ಮೇ 7 ರಿಂದ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.

ಮುಂದಿನ ಶುಕ್ರವಾರ ಕೆಲವೆಡೆ ಮೋಡ ಕವಿದ ವಾತಾವರಣ ಮತ್ತು ಕೆಲವೆಡೆ ಹನಿ ಮಳೆಯಾಗುವ ಸಾಧ‍್ಯತೆಯಿದೆ. ಮೇ 6 ಸೋಮವಾರದಿಂದ ಗುರುವಾರದವರೆಗೆ ಸಣ್ಣ ಮಟ್ಟಿಗೆ ಮಳೆಯಾಗುವ ಸಾಧ‍್ಯತೆಯಿದೆ. ಇದು ಬೆಂಗಳೂರು ಜನರು ಸಮಾಧಾನದ ನಿಟ್ಟುಸಿರು ಬಿಡುವಂತಾಗಿದೆ. ಈ ವಾರ ಬೆಂಗಳೂರಿನಲ್ಲಿ ತಾಪಮಾನ 40 ಡಿಗ್ರಿವರೆಗೆ ಏರಿಕೆಯಾಗಿತ್ತು.

ಕೇವಲ ಬೆಂಗಳೂರು ಮಾತ್ರವಲ್ಲ ದಕ್ಷಿಣ ಕನ್ನಡ, ಉಡುಪಿ, ತುಮಕೂರು ಸೇರಿದಂತೆ ರಾಜ್ಯದ ಹಲೆವೆಡೆ ಮುಂದಿನ ವಾರ ಮಳೆಯಾಗುವ ಸಾಧ‍್ಯತೆಯಿದೆ. ಈ ವಾರ ಎಲ್ಲಾ ಕಡೆ ತಾಪಮಾನ ಗರಿಷ್ಠ ಮಟ್ಟ ತಲುಪಿದ್ದು, ಮುಂದಿನ ವಾರ ಮಳೆಯ ಸೂಚನೆ ಕೊಂಚ ಸಮಾಧಾನ ನೀಡಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಾಳೆ ರಾಜ್ಯದ ಈ ಜಿಲ್ಲೆ ಬಿಟ್ಟು ಬೇರೆಲ್ಲ ಕಡೆ ಮಳೆ

ಕ್ರಿಮಿನಲ್ ವಂಚನೆ ಆರೋಪ: ಗೌತಮ್ ಅದಾನಿಗೆ ಯುಎಸ್‌ ನ್ಯಾಯಾಲಯದಿಂದ ಸಿಕ್ತು ಬಿಗ್ ರಿಲೀಫ್

ಬಟ್ಟೆ ತೊಳೆಯಲು ಹೋಗಿದ್ದ ವೇಳೆ ಕೃಷಿ ಹೊಂಡಕ್ಕೆ ಬಿದ್ದು ಬಾಲಕಿಯರಬ್ಬರ ದುರ್ಮರಣ

ಕಾನೂನು ವಿದ್ಯಾರ್ಥಿನಿ ಮೇಲಿನ ರೇಪ್ ಕೇಸ್‌ನಲ್ಲಿ ಜೈಲು ಸೇರಿದ್ದ ಆರೋಪಿಗೆ ಅದ್ಧೂರಿ ವೆಲ್‌ಕಮ್

ಮಹಿಳೆ, ಮರ್ತಾಂಡ ಆನೆ ಸಾವಿಗೆ ಕಾರಣನಾದ ಕಂಜನ್ ಆನೆಗೆ ದಸರಾಗೆ ಪಾಲ್ಗೊಳ್ಳುವಂತಿಲ್ಲ

ಮುಂದಿನ ಸುದ್ದಿ
Show comments