Publish Date: Wed, 01 May 2024 (20:29 IST)
Updated Date: Wed, 01 May 2024 (20:34 IST)
ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಹಾವೇರಿ ಲೋಕಸಭಾ ಕ್ಷೇತ್ರದ ರಾಣೆಬೆನ್ನೂರಿನಲ್ಲಿ ಬೃಹತ್ ರೋಡ್ ಶೋನಲ್ಲಿ ಭಾಗವಹಿಸಿದ್ದರು. ಅಲ್ಲದೆ ಬಿಜೆಪಿಗೆ ಮತ ಚಲಾಯಿಸಲು ವಿನಂತಿಸಿದರು. ಜನರು ಮತ್ತು ಕಾರ್ಯಕರ್ತರು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದರು.
ಸಂಜೆ ಕುರುಬಗಿರಿ ಕ್ರಾಸ್‍ನಿಂದ ಅಶೋಕ ವೃತ್ತದ ವರೆಗೆ ರೋಡ್ ಷೋ ನಡೆಯಿತು. ಜನರು ಜೈ ಶ್ರೀರಾಮ್, ಭಾರತ್ ಮಾತಾ ಕಿ ಜೈ, ಅಬ್ ಕೀ ಬಾರ್ ಮೋದಿ ಸರಕಾರ್, ಬಿಜೆಪಿ ಬಿಜೆಪಿ, ಮೋದಿ ಮೋದಿ ಎಂಬ ಘೋಷಣೆಗಳನ್ನು ಕೂಗಿದರು. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಬಾವುಟಗಳನ್ನು ಹಿಡಿದಿದ್ದ ಕಾರ್ಯಕರ್ತರು ಪಾಲ್ಗೊಂಡರು.
ಮಾಜಿ ಮುಖ್ಯಮಂತ್ರಿ ಮತ್ತು ಹಾವೇರಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಬಿ.ಸಿ.ಪಾಟೀಲ್, ಪ್ರಮುಖರು ಭಾಗವಹಿಸಿದ್ದರು.