ಬೆಂಗಳೂರು: ಅಕಾಲಿಕವಾಗಿ ಭಾರೀ ಮಳೆಯಾಗಿದ್ದರಿಂದ ರೈತರ ಬೆಳೆಗಳಿಗೆ ಭಾರೀ ಹಾನಿಯಾಗಿದೆ. ಇದರಿಂದಾಗಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ತರಕಾರಿ ರೇಟು ಗಗನಕ್ಕೇರಿದೆ. ಯಾವ ತರಕಾರಿಗೆ ಯಾವ ಬೆಲೆ ಇಲ್ಲಿದೆ ವಿವರ.
ಈರುಳ್ಳಿ, ಟೊಮೆಟೊ ಸೇರಿದಂತೆ ರೈತರು ಬೆಳೆದು ದಾಸ್ತಾನು ಇರಿಸಿದ್ದ ತರಕಾರಿಗಳು ಭಾರೀ ಮಳೆಯಿಂದಾಗಿ ಕೊಳೆಯುವ ಪರಿಸ್ಥಿತಿ ಬಂದಿದೆ. ಇದರಿಂದಾಗಿ ತರಕಾರಿ ರೇಟು ವಿಪರೀತ ಏರಿಕೆಯಾಗಿದೆ. ಅದರಲ್ಲೂ ಟೊಮೆಟೊ ಬಲು ದುಬಾರಿಯಾಗಿದ್ದು 60-70 ರೂ.ಗೆ ಬಂದು ನಿಂತಿದೆ.
ಕಳೆದ ವಾರ ಟೊಮೆಟೊ ದರ 50 ರೂ.ಗಳಷ್ಟಿತ್ತು. ಆದರೆ ಈಗ ಮಳೆಯಿಂದಾಗಿ 70 ರೂ.ವರೆಗೆ ಬಂದು ನಿಂತಿದೆ. ಈರುಳ್ಳಿಯೂ ಹೆಚ್ಚು ಕಡಿಮೆ ಇದೇ ಬೆಲೆ ಹೊಂದಿದೆ. ಆಲೂಗಡ್ಡೆಯೂ ಬೆಲೆ ಏರಿಕೆಯಾಗಿದೆ. ಹಸಿಮೆಣಸು, ಬೀನ್ಸ್, ಕ್ಯಾರೆಟ್ ಬೆಲೆಯೂ ಹೆಚ್ಚಾಗಿದ್ದು ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.