ನೋಟ್ ಬ್ಯಾನ್ ತೀರ್ಮಾನ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರದ್ದಲ್ಲ, ಆರ್‌ಎಸ್‌ಎಸ್ ಆಲೋಚನೆಯನ್ನು ರಾತ್ರೋ ರಾತ್ರಿ ಪ್ರಧಾನಮಂತ್ರಿ ಜಾರಿಗೊಳಿಸಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
 
									
			
			 
 			
 
 			
					
			        							
								
																	
	 
	ಕಲಬುರ್ಗಿಯಲ್ಲಿ ಉದ್ಯಮಿಗಳೊಂದಿಗೆ ನಡೆಸಿದ ಸಂವಾದದಲ್ಲಿ ಮಾತನಾಡಿದ ಅವರು, ಮುಂದು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಜಿಎಸ್‌ಟಿ ಸುಧಾರಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
 
									
										
								
																	
	 
	ನೋಟ್ ಬ್ಯಾನ್ ಮಾಡಲು ಆರ್‌ಬಿಐ, ಹಣಕಾಸು ಇಲಾಖೆಯ ಅಧಿಕಾರಿಗಳು ಅಥವಾ ಅರುಣ್ ಜೇಟ್ಲಿ ಅವರು ಹೇಳಿಲ್ಲ. ಆರ್‌ಎಸ್‌ಎಸ್ ಹೇಳಿದ್ದಕ್ಕೆ ನರೇಂದ್ರ ಮೋದಿ ಅವರು ಹಿಂದೆ ಮುಂದೆ ನೋಡದೇ ಜಾರಿಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.
 
									
											
							                     
							
							
			        							
								
																	
	 
	ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ 
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.