Select Your Language

Notifications

webdunia
webdunia
webdunia
webdunia

ರಾಜ್ಯಕ್ಕೆ ರಾಹುಲ್‌ಗಾಂಧಿ ಬಂದಾಗ ಬಂದ್‌ ನಡೆಸುತ್ತೇವೆ– ಶೆಟ್ಟರ್‌

ರಾಜ್ಯಕ್ಕೆ ರಾಹುಲ್‌ಗಾಂಧಿ ಬಂದಾಗ ಬಂದ್‌ ನಡೆಸುತ್ತೇವೆ– ಶೆಟ್ಟರ್‌
ಹುಬ್ಬಳ್ಳಿ , ಸೋಮವಾರ, 22 ಜನವರಿ 2018 (16:37 IST)
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ರಾಜ್ಯಕ್ಕೆ ಬಂದಾಗ ನಾವು ರಾಜ್ಯದ ಬಂದ್‌ಗೆ ಕರೆ ನೀಡುತ್ತೇವೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಎಚ್ಚರಿಕೆ ನೀಡಿದ್ದಾರೆ.
 
ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜನವರಿ 25ರಂದು ಹಮ್ಮಿಕೊಂಡಿರುವ ಬಂದ್ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕುತಂತ್ರವಿದೆ. ನಮಗೂ ರಾಜಕೀಯ ಗೊತ್ತಿದೆ. ರಾಹುಲ್ ಗಾಂಧಿ ರಾಜ್ಯಕ್ಕೆ ಬಂದಾಗ ನಾವೂ ಬಂದ್‌ಗೆ ಕರೆ ನೀಡುತ್ತೇವೆ ಎಂದು ತಿಳಿಸಿದ್ದಾರೆ.

ಮಹಾದಾಯಿ ಜಾರಿಗೆ ಒತ್ತಾಯಿಸಿ ನೀಡಿರುವ ಬಂದ್ ಕಾಂಗ್ರೆಸ್‌ ಪ್ರಾಯೋಜಿತವಾಗಿದೆ. ಫೆಬ್ರುವರಿ 4ರಂದು ಕೂಡ ಬಂದ್‌ಗೆ ನಿರ್ಧರಿಸಲಾಗಿದೆ. ಆದರೆ, ರಾಹುಲ್ ಗಾಂಧಿ ಅವರು ಈವರೆಗೂ ಮಹಾದಾಯಿ ವಿಚಾರದಲ್ಲಿ ಮೌನವಹಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ರಾಹುಲ್ ಗಾಂಧಿ ತಮ್ಮ ನಿಲುವು ಸ್ಪಷ್ಟಪಡಿಸಲಿ. ಗೋವಾ ಕಾಂಗ್ರೆಸ್‌ನವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಸಲಿ ಎಂದು ಸವಾಲು ಹಾಕಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಗಣರಾಜ್ಯೋತ್ಸವ ಪಥಸಂಚಲನೆಯಲ್ಲಿ ಎನ್ಎ‌ಸ್‌ಜಿ