ಹಾಸನ ಗಣೇಶ ಮೆರವಣಿಗೆ ಸಂತ್ರಸ್ತರಿಗೆ ದೊರೆಯದ ಪರಿಹಾರ: ಆರ್ ಅಶೋಕ ವಾಗ್ದಾಳಿ

Krishnaveni K
ಶುಕ್ರವಾರ, 19 ಸೆಪ್ಟಂಬರ್ 2025 (12:03 IST)
ಬೆಂಗಳೂರು: ಹಾಸನದಲ್ಲಿ ಮೊನ್ನೆಯಷ್ಟೇ ಗಣೇಶ ಮೆರವಣಿಗೆ ವೇಳೆ ಟ್ರಕ್ ಹರಿದು 10 ಜನ ಸಾವನ್ನಪ್ಪಿ ಹಲವರು ಗಾಯಗೊಂಡಿದ್ದರು. ಆದರೆ ಇದುವರೆಗೆ ಅವರಿಗೆ ಪರಿಹಾರ ಹಣ ಸಿಕ್ಕಿಲ್ಲ. ಅದೇ ವಿಚಾರವಾಗಿ ವಿಪಕ್ಷ ನಾಯಕ ಆರ್ ಅಶೋಕ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

‘ಹಾಸನದ ಮೊಸಳೆಹೊಸಹಳ್ಳಿ ಗಣೇಶ ವಿಸರ್ಜನೆ ಮರವಣಿಗೆಯಲ್ಲಿ ಭಾಗವಹಿಸಿದ್ದ ಜನರ ಮೇಲೆ ಟ್ರಕ್ ಹರಿದು 10 ಜನರು ಸಾವನ್ನಪ್ಪಿ, 21 ಜನರು ಗಾಯಗೊಂಡ ಪ್ರಕರಣದಲ್ಲಿ ಗಾಯಗೊಂಡವರ ಚಿಕಿತ್ಸಾ ವೆಚ್ಚ ಭರಿಸುವ ಭರವಸೆ ನೀಡಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿದ್ದ 50,000 ರೂಪಾಯಿ ಪರಿಹಾರವನ್ನೂ ನೀಡಿಲ್ಲ, ಚಿಕಿತ್ಸಾ ವೆಚ್ಚವನ್ನು ಭರಿಸುತ್ತಿಲ್ಲ.

ಕನಿಷ್ಠ ಪಕ್ಷ ಸಚಿವರು, ಶಾಸಕರು ಅಥವಾ ಹಿರಿಯ ಅಧಿಕಾರಿಗಳು ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿರುವ ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡುವ ಕನಿಷ್ಠ ಸೌಜನ್ಯವೂ ತೋರುತ್ತಿಲ್ಲ.

ಸಿಎಂ ಸಿದ್ದರಾಮಯ್ಯನವರೇ, ಹಿಮಾಚಲ ಪ್ರದೇಶದಲ್ಲಿ ಪ್ರವಾಹವಾದರೆ ₹5 ಕೋಟಿ ರೂಪಾಯಿ ಕೊಡಲು ದುಡ್ಡಿದೆ. ವಯನಾಡಿನಲ್ಲಿ ಭೂಕುಸಿತವಾದರೆ 100 ಮನೆ ಕಟ್ಟಿಕೊಡಲು ದುಡ್ಡಿದೆ. ಆದರೆ ನಮ್ಮ ರಾಜ್ಯದ ಯುವಕರ ಚಿಕಿತ್ಸೆಗೆ ಹಣ ಕೊಡಲು ದುಡ್ಡಿಲ್ಲ. ಈ ಜನವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ’  ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಈ ಒಂದು ಕಾರಣಕ್ಕೆ ಸಿದ್ದರಾಮಯ್ಯ ಮೇಲೆ ರಾಹುಲ್ ಗಾಂಧಿಗೆ ಹೆಚ್ಚು ಒಲವು

ಪ್ರಿಯಕರನ ಜೊತೆ ಸೇರಿ ಗಂಡನ ಕೊಂದು ಡ್ರಮ್ ನಲ್ಲಿರಿಸಿದ್ದ ಮುಸ್ಕಾನ್ ಕತೆ ಏನಾಗಿದೆ ನೋಡಿ

ಯಡಿಯೂರಪ್ಪ ಅಂದೇ ಡಿಕೆ ಶಿವಕುಮಾರ್ ಭವಿಷ್ಯ ನುಡಿದಿದ್ದರು

ಅಯೋಧ್ಯೆಯಲ್ಲಿ ರಾರಾಜಿಸಲಿದೆ ರಘುವಂಶದ ಕೇಸರಿ ಧ್ವಜ: ಪ್ರಧಾನಿ ಮೋದಿ ಚಾಲನೆ

ರಾಜ್ಯದ ಸಿಎಂ ಕುರ್ಚಿ ಫೈಟ್ ಪರಿಹಾರಕ್ಕೆ ಈ ಒಂದು ಮೀಟಿಂಗ್ ಮೇಲೇ ಎಲ್ಲರ ಕಣ್ಣು

ಮುಂದಿನ ಸುದ್ದಿ
Show comments